

ಮುಂಬೈ: ಬ್ಲಾಕ್ಬಸ್ಟರ್ ತೆಲುಗು ಸಿನಿಮಾಗಳಲ್ಲಿ ನಟಿಸಿ, ಮಿಂಚಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಇತ್ತೀಚೆಗಷ್ಟೇ ನಟ-ನಿರ್ಮಾಪಕ ಜಾಕಿ ಭಗ್ನಾನಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ಕೆಲವು ವಾರಗಳ ಹಿಂದೆ ಗೋವಾದಲ್ಲಿ ನಡೆದ ಅತ್ಯಂತ ಆತ್ಮೀಯ ಕೂಟದಲ್ಲಿ ಈ ಜೋಡಿಯ ಅದ್ದೂರಿ ವಿವಾಹ ನಡೆದಿದ್ದು, ಸುದ್ದಿಗಾರರೊಬ್ಬರು ಇತ್ತೀಚಿನ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ನಟಿ ಕೊಟ್ಟ ಉತ್ತರ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನೀವು ಈಗ ನಿಮ್ಮ ಬೋಲ್ಡ್ ಡ್ರೆಸ್ಸಿಂಗ್ ಸ್ಟೈಲ್ ಅನ್ನು ಅಡ್ಜೆಸ್ಟ್ ಮಾಡಿಕೊಳ್ಳುತ್ತೀರೋ ಹೇಗೆ? ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಆಲಿಸಿದ ರಾಕುಲ್, "ಡ್ರೆಸ್ಸಿಂಗ್ ಬಗ್ಗೆ ನನ್ನ ಪತಿ ತುಂಬಾನೇ ಕೂಲ್ ಇದ್ದಾರೆ. ಪತಿಯ ಮನೆಯವರೂ ಕೂಡ ಕೂಲ್ ಆಗಿದ್ದಾರೆ. ಹಾಗಾಗಿ ಯಾವುದೇ ತೊಂದರೆಯಿಲ್ಲ" ಎಂದು ಹೇಳಿದರು. ಆದ್ರೆ...
"ನಟಿಯರ ಬೋಲ್ಡ್ ಡ್ರೆಸ್ಸಿಂಗ್ ಬಗ್ಗೆ ಪ್ರಶ್ನೆ ಮಾಡುವ ನೀವು, ಯಾಕೆ ನಟರನ್ನು ಇದೇ ರೀತಿಯಲ್ಲಿ ಪ್ರಶ್ನಿಸುವುದಿಲ್ಲ? ಮದುವೆಯಾದ ಬಳಿಕ ನಟರು ತಮ್ಮ ಡ್ರೆಸ್ಸಿಂಗ್ ಸ್ಟೈಲ್ನ ಬದಲಾಯಿಸುತ್ತಾರಾ? ಇಲ್ಲ ಅಲ್ವೇ" ಎಂದು ಹೇಳುವ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರೆ. ಸದ್ಯ ನಟಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ,(ಏಜೆನ್ಸೀಸ್).