ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ನಡುಬೀದಿಯಲ್ಲೇ ಕಿಸ್​ ಕೊಟ್ಟು ಕಾಲ್ಕಿತ್ತ ಯುವಕ! ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್..​

school girl
Published on

ದಿನಾಜ್‌ಪುರ(ಬಾಂಗ್ಲಾದೇಶ): ಹೆಣ್ಣುಮಕ್ಕಳು ಒಂಟಿಯಾಗಿ ಕಂಡರೆ ಕೆಲವು ಪುರುಷರಲ್ಲಿ ರಾಕ್ಷಸಿ ವರ್ತನೆ ಉಂಟಾಗುತ್ತದೆ. ಇತ್ತೀಚೆಗೆ ನಮ್ಮ ನೆರೆರಾಷ್ಟ್ರ ಬಾಂಗ್ಲಾದಲ್ಲಿ ನಡೆದಿರುವ ಇಂತಹುದೇ ಒಂದು ಘಟನೆ ನೋಡಿದರೆ ಹೆಣ್ಮಕ್ಕಳನ್ನು ಒಂಟಿಯಾಗಿ ಶಾಲೆಗೆ ಕಳುಹಿಸುವ ಪಾಲಕರು ಯೋಚಿಸುವಂತಾಗುತ್ತದೆ.

ದಿನಾಜ್‌ಪುರದಲ್ಲಿ ನಡೆದಿರುವ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ಕಾಮುಕನ ನಡವಳಿಕೆಯನ್ನು ವ್ಯಾಪಕವಾಗಿ ಟೀಕಿಸುತ್ತಿದ್ದಾರೆ.

ಇಂಥವರನ್ನು ಸುಮ್ಮನೆ ಬಿಡಬಾರದು, ಕೂಡಲೇ ಹಿಡಿದು ಕಠಿಣ ಶಿಕ್ಷೆ ವಿಧಿಸಬೇಕು. ಹಾಗಾದರೆ ಮಾತ್ರ ಹೀಗೆ ಯೋಚಿಸುವವರಿಗೆ ಭಯ ಹುಟ್ಟುತ್ತದೆ. ಘಟನೆ ಎಲ್ಲೇ ನಡೆದರೆ ಏನಂತೆ, ಏನೂ ತಿಳಿಯದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳ ಪ್ರಕಾರ ಬಾಲಕಿ ಶಾಲಾ ಸಮವಸ್ತ್ರ ಧರಿಸಿ ಶಾಲೆಗೆ ಹೋಗುತ್ತಿದ್ದಳು. ಆಗ ಆ ಬೀದಿಯಲ್ಲಿ ಜನರೇ ಇರಲಿಲ್ಲ. ಇದನ್ನು ಗಮನಿಸಿದ ಯುವಕ ಬಾಲಕಿಯನ್ನು ಹಿಂಬಾಲಿಸಿದ. ಅವನು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಗ್ರಹಿಸಿದ ಹುಡುಗಿ ಭಯದಿಂದ ಪಕ್ಕಕ್ಕೆ ನಿಂತಳು. ಯುವಕ ತಕ್ಷಣ ಆಕೆಯ ಮೇಲೆ ಹಾರಿ ಬಲವಂತವಾಗಿ ಬಾಲಕಿಗೆ ಮುತ್ತು ನೀಡಿ.. ಅಸಭ್ಯವಾಗಿ ವರ್ತಿಸಿದ್ದಾನೆ.

ಆ ಹುಡುಗಿ ಗಾಬರಿಯಾಗಿದ್ದಾಳೆ. ತಕ್ಷಣ ಬಾಲಕ ಅಲ್ಲಿಂದ ಓಡಿ ಹೋಗಿದ್ದಾನೆ. ಇದೆಲ್ಲ ಸಿಸಿಟಿವಿಯಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net