ತಾಯಿಗೆ ದೇಗುಲ ಕಟ್ಟಿದ ಮಕ್ಕಳು! ನಿತ್ಯ ಪೂಜೆ, ಅಮ್ಮನಿಗಾಗಿ ಹಂಬಲಿಸುತ್ತಿದೆ ಮನ... ವಿಜಯಪುರದಲ್ಲಿ ಮನಮಿಡಿಯುವ ದೃಶ್ಯ

vijayapura mother god
Published on

ವಿಜಯಪುರ: ಪ್ರತ್ಯಕ್ಷವಾಗಿ ಕಾಣುವ ದೇವರು ಎಂದಾಕ್ಷಣ ತಾಯಿ ಕಣ್ಮುಂದೆ ಬರುತ್ತಾಳೆ. ಅಂತಹ ತಾಯಿಗಾಗಿ ಮಕ್ಕಳು ದೇಗುಲವನ್ನೇ ಕಟ್ಟಿಸಿದ್ದಾರೆ. ಹೆತ್ತಮ್ಮನ ವಿಗ್ರಹಕ್ಕೆ ಮಗನಿಂದ ನಿತ್ಯ ಪೂಜೆ ನಡೆಯುತ್ತಿದೆ.

ಇಂತಹ ಅಪರೂಪದ ದೃಶ್ಯ ವಿಜಯಪುರ ತಾಲೂಕಿನ ಜಾಲಗೇರಿ ಗ್ರಾಮದ ತೋಟವೊಂದರಲ್ಲಿ ಕಾಣಸಿಗುತ್ತೆ. ಜಾಲಗೇರಿ ಗ್ರಾಮದ ದುಂಡಪ್ಪ ಕಾಂಬಳೆ ಎಂಬುವರ ಪತ್ನಿ ಗಜರಾಬಾಯಿ ಕಾಂಬಳೆ(68) ಅವರು ಕಳೆದ ವರ್ಷ ಮಹಾಮಾರಿ ಕರೊನಾ ಸಂಕಷ್ಟ ಕಾಲದಲ್ಲಿ ಮೃತಪಟ್ಟರು. ಇವರಿಗೆ ದಂಪತಿಗೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಪುತ್ರ ಯಮನಪ್ಪ, ಪುತ್ರಿಯರಾದ ರೇಣುಕಾ ಹಾಗೂ ಶಾಂತಾಬಾಯಿ ಸೇರಿ ಮೂವರು ಮಕ್ಕಳಿದ್ದಾರೆ.

ಅಮ್ಮನ ಸಾವು ಮಕ್ಕಳಿಗೆ ಅತೀವ ನೋವು ನೀಡಿತು. ತಮ್ಮ ಮೇಲೆ ತಾಯಿ ತೋರುತ್ತಿದ್ದ ಪ್ರೀತಿಯನ್ನ ನೆನೆದು ಮಕ್ಕಳು ಅಮ್ಮನ ಪ್ರೀತಿಗಾಗಿ ಹಂಬಲಿಸುತ್ತಿದ್ದರು. ಅಮ್ಮನನ್ನು ನಿತ್ಯ ನೋಡಬೇಕು ಎಂದು ತೀರ್ಮಾನಿಸಿ ಗುಡಿಯನ್ನೇ ಕಟ್ಟಿದ್ದಾರೆ.

ಮೂವರು ಮಕ್ಕಳೂ ಸೇರಿ ತಾಯಿಯ ಪ್ರತಿಮೆ ಕೆತ್ತಿಸಿ ಪ್ರತಿಷ್ಠಾಪಿಸಿದ್ದಾರೆ. ಪುತ್ರ ಯಮನಪ್ಪ ನಿತ್ಯ ಎರಡು ಬಾರಿ ತಾಯಿಗೆ ಪೂಜೆ ಮಾಡ್ತಾರೆ. ಪಂಡರಾಪುರದಲ್ಲಿ ಮಾರ್ಬಲ್ ಕಲ್ಲಿನಲ್ಲಿ ಮೂರ್ತಿ ಕೆತ್ತಿಸಿದ್ದು, ಬಣ್ಣದಲ್ಲಿ ತಾಯಿ ಗಜರಾಬಾಯಿ ಪ್ರತಿರೂಪದಂತಿದೆ. ಹೆತ್ತವ್ವಳಿಗೆ ಮಕ್ಕಳು ಮಂದಿರ ಕಟ್ಟಿಸಿ ಪೂಜೆ ಮಾಡುತ್ತಿರುವ ದೃಶ್ಯ ನೋಡಿದ್ರೆ ಭಾವುಕರಾಗ್ತೀರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net