More

    ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

    ತುಮಕೂರು: ನಾನು ನಾಲ್ಕು ತಿಂಗಳ ಗರ್ಭಿಣಿ. ನನ್ನ ಗಂಡನನ್ನು ನನ್ನ ಅತ್ತೆಯೇ ಕೊಂದು ಬಿಟ್ರು. ನೇಣಾಕೊಂಡು ಸಾಯು ಅಂತ ಮಗನಿಗೆ ತಾಯಿಯೇ ನಿನ್ನೆ ಬೈದರು. ಮನನೊಂದ ನನ್ನ ಗಂಡ ಮನೆಯಿಂದ ಹೊರ ಹೋದವರು ವಾಪಸ್​ ಬಾರಲೇ ಇಲ್ಲ. ರಾತ್ರಿಯಲ್ಲಾ ಫೋನ್ ಮಾಡಿದೆ, ಕಾಲ್ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಸಾವಿನ ಸುದ್ದಿ ಬಂತು… ನಾನೇನು ಮಾಡಲಿ? ಹೊಟ್ಟೆಯಲ್ಲಿ ಅವರ ಮಗು ಇದೆ… ನನ್ನನ್ನು ತಬ್ಬಲಿ ಮಾಡಿ ಹೋಗಿಬಿಟ್ರು… ಎಂದು ಕುಣಿಗಲ್​ ತಾಲೂಕಿನ ರೈತ ಶಂಕರಣ್ಣನ ಪತ್ನಿ ಬಿಕ್ಕಿಬಿಕ್ಕಿ ಅತ್ತರು.

    25 ವರ್ಷದ ಮೇಘನಾ ಮತ್ತು 45 ವರ್ಷದ ಶಂಕರಣ್ಣ 5 ತಿಂಗಳ ಹಿಂದಷ್ಟೇ ಸರಳವಾಗಿ ಮದ್ವೆಯಾಗಿದ್ದರು. ಕಳೆದ ತಿಂಗಳು ಶಂಕರಣ್ಣ-ಮೇಘನಾ ದಂಪತಿ ಊರಿಗೆಲ್ಲ ಊಟ ಹಾಕಿಸಿ ಅದ್ದೂರಿಯಾಗಿ ಪ್ರೇಮಿಗಳ ದಿನ ಆಚರಿಸಿಕೊಂಡಿದ್ದರು. ಇಬ್ಬರೂ ಕಲರ್​ಫುಲ್ ಆಗಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು. ನಾವು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋ ಹಾಗೆ ಕಾಣಿಸಿಕೊಂಡಿದ್ದರು. ಇಂದು(ಮಂಗಳವಾರ) ಬೆಳಗ್ಗೆ ಶಂಕರಣ್ಣನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದಕ್ಕೆಲ್ಲಾ ಸೊಸೆಯೇ ಕಾರಣ ಎಂದು ಮೃತರ ತಾಯಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಂಡನನ್ನು ಕಳೆದುಕೊಂಡು ಕಂಗಾಲಾಗಿರುವ ಮೇಘನಾ, ಅತ್ತೆಯ ಆರೋಪ ಕೇಳಿ ಮತ್ತಷ್ಟು ಕುಸಿದಿದ್ದಾರೆ. ನೋವಿನಲ್ಲೇ ತಾನು ಮದ್ವೆ ಆದಾಗಿನಿಂದ ಅನುಭವಿಸಿದ ಹಿಂಸೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ನಾನು ಜಮೀನು, ಹಣ, ಅಂತಸ್ತು ನೋಡಿ ಶಂಕರಣ್ಣ ಅವರ ಬಳಿ ಬರಲಿಲ್ಲ. ಒಂದ್ವೇಳೆ ಆ ರೀತಿ ನಾನು ಇದ್ದರೆ, ಮದುವೆಗೆ ಮುಂಚೇನೆ ನನ್ನ ಹೆಸರಿಗೆ ಆಸ್ತಿ ಬರೆಯುವಂತೆ ಕೇಳುತ್ತಿದ್ದೆ. ಮೆಣಸಿಗೆರೆ ದೊಡ್ಡಿಯ ರಾಜಣ್ಣ ಎಂಬುವರು ನಮ್ಮಿಬ್ಬರ ಮದುವೆ ಮಾಡಿಸಿದರು. ಅಪ್ಪ-ಅಮ್ಮನನ್ನು ಬಿಟ್ಟು ಮದುವೆಯಾಗಿದ್ದೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಆದರೆ ಎಲ್ಲರೂ ಸೇರಿಕೊಂಡು ಕಾಟ ನೀಡಿದ್ರು. ನನಗೆ ಈ ಮೊದಲೇ ಬೇರೊಬ್ಬರನ ಜತೆ ಲವ್ ಮ್ಯಾರೇಜ್ ಆಗಿತ್ತು. ಆತ ಸಾಲ ಮಾಡಿಕೊಂಡು ನನ್ನನ್ನು ಬಿಟ್ಟು ಹೋದ. ಆತನನ್ನು ಒಂದೂವರೆ ವರ್ಷ ಹುಡುಕಿಸಿದ್ದೆ, ಆತ ಸಿಗಲಿಲ್ಲ. ಪೊಲೀಸ್ ಠಾಣೆಗೂ ದೂರು ನೀಡಿದ್ದೆ. ಕೊನೆಗೆ ರಾಜಣ್ಣ ಎಂಬುವರರು ಶಂಕರಪ್ಪ ಅವರ ಜತೆ ಮದುವೆ ಆಗುವಂತೆ ಪ್ರಸ್ತಾಪ ಮಾಡಿದರು. ಶಂಕರಪ್ಪ ಅವರು ನನ್ನನ್ನು ಇಷ್ಟಪಟ್ಟಿ ಮದುವೆಯಾದ್ರು. ಮದುವೆ ಸಂದರ್ಭದಲ್ಲಿ ಸೀರೆ, ತಾಳಿ, ಕಾಲೂಂಗರ ಮಾತ್ರ ಕೊಟ್ಟಿದ್ದರು. ನಾನು ಆಸ್ತಿ ಮಾರೋಣ, ಬೆಂಗಳೂರು ಅಥವಾ ಮೈಸೂರಿಗೆ ಹೋಗಿ ವಾಸಿಸೋಣ ಎಂದೂ ಡಿಮಾಂಡ್ ಮಾಡಿರಲಿಲ್ಲ. ನಾನು ಶಂಕರಣ್ಣ ಅವರನ್ನ ಮದ್ವೆ ಆಗಿದ್ದು ನನ್ನ ಅತ್ತೆ ಅಂದರೆ ಶಂಕರಣ್ಣ ಅವರಿಗೆ ಇಷ್ಟ ಇರಲಿಲ್ಲ. ನಾವು ಮದುವೆ ಆದ ಮೂರು ತಿಂಗಳು ಎಲ್ಲವೂ ಚೆನ್ನಾಗಿತ್ತು. ಆಮೇಲೆ ನನ್ನ ಅತ್ತೆ ಜಗಳ ತೆಗೆದರು… ಎಂದು ಮೇಘನಾ ಕಣ್ಣೀರಿಟ್ಟರು.

    ಹೊಸ ವರ್ಷದ ದಿನವೇ ಮನೆಯಲ್ಲಿ ಪಾತ್ರೆ ತೊಳೆಯುವ ವಿಚಾರವಾಗಿ ಅತ್ತೆ ಜಗಳ ಮಾಡಿದ್ರು. ತಾಯಿ-ಮಗನನ್ನು ದೂರ ಮಾಡ್ತಿದ್ದಾಳೆ ಅಂತ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದರು. ನಾನು ಮತ್ತು ನನ್ನ ಗಂಡ ಚೆನ್ನಾಗಿದ್ವಿ, ಎರಡು ತಿಂಗಳಿಂದ ನನ್ನ ಜತೆ ಅತ್ತೆ ಜಗಳ ಮಾಡುತ್ತಿದ್ದರು. ಈ ಹಿಂದೆ 15 ದಿನಕ್ಕೊಮೆಯಾದ್ರೂ ಜಗಳ ಆಗುತ್ತಿತ್ತು. ಗಂಡ- ಹೆಂಡತಿ ನಡುವೆ ಯಾವ ಸಮಸ್ಯೆಯೂ ಇರ್ಲಿಲ್ಲ. ಪದೇಪದೆ ಹೊರಗೆ ಹೋಗ್ತಾಳೆ… ಎಂದು ಅತ್ತೆ ಜಗಳ ಮಾಡುತ್ತಿದ್ರು. ನನ್ನ ತಂದೆ-ತಾಯಿ ಜತೆಗೂ ಮಾತನಾಡಲು ಬಿಡುತ್ತಿರಲಿಲ್ಲ. ನಾನು ಯಾವುದೇ ಕಾಟ ಕೊಟ್ಟಿಲ್ಲ. ನಿನ್ನೆ ಸಂಜೆ ಕೂಡ ಕೂಡ ನನ್ನ ಅತ್ತೆ ನನ್ನನ್ನು ಕೆಟ್ಟದಾಗಿ ಬೈದರು. ಈ ವೇಳೆ ನನ್ನ ಗಂಡ ಹೀಗೆಲ್ಲ ಯಾಕೆ ಮಾಡ್ತೀರಿ? ಇಬ್ಬರನ್ನೂ ಸಂಭಾಳಿಸಲು ಸಾಧ್ಯವಿಲ್ಲ ಅಂತ ಅಂದ್ರು. ಆಗ ಅವರ ತಾಯಿಯೇ ಮಗನ್ನು ಹೋಗಿ ಸಾಯಿ ಅಂದ್ರು… ನನ್ನ ಗಂಡ ನನ್ನನ್ನು… ನನ್ನ ಮಗುವನ್ನೂ ಬಿಟ್ಟು ಹೋಗ್ಬಿಟ್ರು… ಎಂದು ಮೇಘನಾ ಗೋಳಾಡಿದ್ರು.

    ಒಲವಿನ ಬದುಕಿಗೆ ಪ್ರೀತಿಯೊಂದಿದ್ದರೆ ಸಾಕು ಬೇರೇನೂ ಬೇಡ… ಎಂಬಂತೆ ತನಗಿಂತ 20 ವರ್ಷ ದೊಡ್ಡವರನ್ನ ಕೈಹಿಡಿದ ಮೇಘನಾಳ ಲವ್​ ಸ್ಟೋರಿ ದುರಂತ ಅಂತ್ಯ ಕಂಡದ್ದು ವಿಪರ್ಯಾಸ.

    ಸೊಸೆ ವಿರುದ್ಧ ಶಂಕರಪ್ಪನ ತಾಯಿ ದೂರು: ನಿನ್ನೆ ಸಂಜೆ ಆ ಘಟನೆ ನಡೆಯದಿದ್ರೆ ಶಂಕರಪ್ಪ ಬದುಕುತ್ತಿದ್ದರೇ…

    ಡೆತ್​ನೋಟ್​ ಬರೆದಿಟ್ಟು ಶಂಕರಪ್ಪ ಆತ್ಮಹತ್ಯೆ! ಮದ್ವೆಯಾದ 5 ತಿಂಗಳಲ್ಲೇ ದುರಂತ, ಪತ್ನಿ ಮೇಘನಾಳ ಗೋಳಾಟ ನೋಡಲಾಗ್ತಿಲ್ಲ…

    ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts