More

    ಅಜ್ಞಾನ ಕಳೆಯಲು ಜ್ಞಾನ ಅವಶ್ಯಕ

    ಕುಡಚಿ: ಮನುಷ್ಯನಲ್ಲಿರುವ ಅಜ್ಞಾನ ಕಳೆಯಲು ಜ್ಞಾನದ ಬೆಳಕು ಅವಶ್ಯ ಎಂದು ಶಿರಗೂರದ ಅಭಿನವ ಕಲ್ಮೇಶ್ವರ ಸ್ವಾಮೀಜಿ ಹೇಳಿದರು.

    ಸಮೀಪದ ಹಾಲಶಿರಗೂರ ಗ್ರಾಮದಲ್ಲಿ 25ನೇ ವರ್ಷದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ದೀಪೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಮನುಷ್ಯ ಜ್ಞಾನ ಸಂಪಾದನೆ ಮಾಡಿಕೊಳ್ಳುವತ್ತ ಗಮನಹರಿಸಬೇಕು ಎಂದರು.

    ಪರಮಾನಂದವಾಡಿಯ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ. ಜ್ಞಾನ ನಿಜವಾದ ಸಂಪತ್ತು ಎಂದು ತಿಳಿಸಿದರು. ಉಮರಾಣಿ ಮಾತೋಶ್ರಿ ಅಕ್ಕಮಹಾದೇವಿ, ಸಿದ್ದಾಪುರದ ಕಾಡಯ್ಯ ಸ್ವಾಮೀಜಿ, ನಿತಿನ ಶಿರಗುರಕರ, ಅಮಿತ ಶಿರಗುರಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts