More

    ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿ

    ಕುಕನೂರು: ವಿಶ್ವ ಬಂಧು ಸೇವಾ ಗುರು ಬಳಗ ಶಾಲೆ ಗೋಡೆಗಳ ಮೇಲೆ ಕಲಿಕೆ ವಿಷಯಗಳನ್ನ ಬರೆಯುತ್ತಿರುವುದು ಶ್ಲಾಘನೀಯ ಎಂದು ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಮಹೇಶ ಸಬರದ ಹೇಳಿದರು.

    ಇದನ್ನೂ ಓದಿ: ಮಾ.3ರಂದು ಪಲ್ಸ್ ಪೋಲಿಯೋ ಅಭಿಯಾನ: 0-5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಲು ಜಿಲ್ಲಾಧಿಕಾರಿ ಮನವಿ

    ವಿಶ್ವ ಬಂಧು ಸೇವಾ ಗುರು ಬಳಗ ತಿಪ್ಪರಸನಾಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಡೆಗಳ ಮೇಲೆ ಬರೆಯುತ್ತಿರುವುದನ್ನು ಭಾನುವಾರ ವಿಕ್ಷಿಸಿ ಮಾತನಾಡಿದರು.

    ಸರ್ಕಾರಿ ಶಾಲೆಗಳು ಮಕ್ಕಳಿಗೆ ಆಕರ್ಷಣೆಯಾಗಬೇಕು. ಜ್ಞಾನ ವೃದ್ಧಿ ವಿಷಯ ಒಳಗೊಂಡ ಪ್ರೇರಣಾತ್ಮಕ ನುಡಿಗಳನ್ನು ಗೋಡೆ ಬರಹ ಮಾಡಬೇಕು. ಗುರು ಬಳಗ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ 14 ಶಾಲೆಗಳಲ್ಲಿ ಗೋಡೆ ಬರಹ ಮಾಡುವ ಮೂಲಕ ಶಾಲೆ ಅಂದವನ್ನು ಹೆಚ್ಚಿಸಿ, ಮಕ್ಕಳಿಗೆ ಜ್ಞಾನ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.

    ವಿಶ್ವ ಬಂಧು ಸೇವಾ ಗುರು ಬಳಗದ ಮುಖ್ಯಸ್ಥ ಸಿದ್ಧಲಿಂಗಪ್ಪ ಶ್ಯಾಗೋಟಿ, ಅವಳಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ವಿ.ಧರಣಾ, ಮಾರುತೇಶ ತಳವಾರ, ಶಿಕ್ಷಕರಾದ ವೀರಣ್ಣ ಮೆಣಸಿನಕಾಯಿ, ಸುರೇಶ ಮಡಿವಾಳರ, ಚಂದ್ರಪ್ಪ ರಾಜೂರ, ಬಸವರಾಜ ಹವಳೆ, ವೀರೇಶ ಮ್ಯಾಗಳೇಶಿ,

    ಖಾಜಾಸಾಬ್ ಹೊಸಳ್ಳಿ, ವೀರಭದ್ರಪ್ಪ ಕಮ್ಮಾರ, ಮಲ್ಲಿಕಾರ್ಜುನ ಕುಂಬಾರ, ಶಿವಕುಮಾರ ಹೊಂಬಳ, ಬಸವರಾಜ ಮುಳಗುಂದ, ಆರ್. ಶರಣಪ್ಪ , ಹನುಮಂತಪ್ಪ ಬಿನ್ನಾಳ, ಮಂಜುನಾಥ ಮನ್ನಾಪೂರ, ಟಿ.ಮಂಜುನಾಥಯ್ಯ,

    ಬಸವರಾಜ ಸಾರಂಗಮಠ, ಮಲ್ಲಪ್ಪ ಪಟ್ಟೇದ, ಶಿವಪ್ಪ ಕರಿಯಣ್ಣವರ, ಸೋಮಣ್ಣ, ಕೊಟ್ರೇಶ್ ಪಠಾಣ್, ಮರ್ತುಜಾಸಾಬ ಮುಜಾವರ, ಟಿ.ಸಿದ್ರಾಮಪ್ಪ, ಮಹಾವೀರ ಕಲಭಾವಿ, ಶಂಭು ಅರಿಶಿಣದ, ಶಿವಕುಮಾರ ಮುತ್ತಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts