More

  ಗೆದ್ದ ಖುಷಿಯಲ್ಲಿದ್ದ RCB ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ತೆರಳಿದ ಧೋನಿ; ನಿಮ್ಮಿಂದ ಇದನ್ನು ನೀರಿಕ್ಷೆ ಮಾಡಿರಲಿಲ್ಲ ಎಂದ್ರು ಫ್ಯಾನ್ಸ್​

  ಬೆಂಗಳೂರು: ಆರ್​ಸಿಬಿ, ಸಿಎಸ್​ಕೆ ನಡುವಿನ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 27 ರನ್​ಗಳಿಂದ ಗೆದ್ದುಕೊಂಡಿತು. ಚೆನ್ನೈ ಸೂಪರ್​ಕಿಂಗ್ಸ್​ಗೆ ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ಸಿಎಸ್​ಕೆ ತಂಡದ ನಾಯಕನಾಗಿರುವ ಎಂಎಸ್​ ಧೋನಿ ಸೋತಿರುವ ಬೇಸರದಲ್ಲಿ ಕ್ರಿಡಾಂಗಣದಿಂದ ಹೊರಗೆ ನಡೆದಿರುವ ವಿಡಿಯೋವೊಂದು ವೈರಲ್​​ ಆಗುತ್ತಿದೆ.

  ಟೂರ್ನಿಯ ಮೊದಲಾರ್ಧದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್​ಸಿಬಿ ಧ್ವಿತಿಯಾರ್ಧದಲ್ಲಿ ಮಾಡಿದ ಕಮ್​ಬ್ಯಾಕ್​ ಐಪಿಎಲ್​ನ ಚಿತ್ರಣವನ್ನೇ ಬದಲಿಸಿತ್ತು. ಇನ್ನೂ ಪಂದ್ಯದ ವೇಳೆ ನಡೆದ ಘಟನೆಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

  ಮೇ 18 ರಂದು ಶನಿವಾರ RCB ವಿರುದ್ಧ CSK ಸೋತಿದೆ. ಬೆಂಗಳೂರು ತಂಡದ ವಿರುದ್ಧ 27 ರನ್‌ಗಳ ಸೋಲಿನ ನಂತರ CSK ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಬಿದ್ದಿದೆ. ಪಂದ್ಯದ ಮುಕ್ತಾಯದ ನಂತರ, ಎಂಎಸ್ ಧೋನಿ ಆರ್‌ಸಿಬಿ ತಂಡದೊಂದಿಗೆ ಹಸ್ತಲಾಘವ ಮಾಡದಿರಲು ನಿರ್ಧರಿಸಿದರು, ಪಂದ್ಯ ಮಗಿದು ಆರ್​ಸಿಬಿ ತಂಡ ಸಂಭ್ರಮಿಸುತ್ತಿದ್ದಂತೆ ಎಂಎಸ್ ಧೋನಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ.

  ವಿಡಿಯೋದಲ್ಲಿ ಏನಿದೆ?: ಪಂದ್ಯ ಮುಗಿದ ಬಳಿಕ ಸಿಎಸ್​ಕೆ ಆಟಗಾರರು ಹಸ್ತಲಾಘವ ನೀಡಲು ಸರದಿ ಸಾಲಿನಲ್ಲಿ ಸಾಗಿದ್ದರು. ಈ ಸಾಲಿನಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂಚೂಣಿಯಲ್ಲಿದ್ದರು. ಆದರೆ ಅತ್ತ ರಣರೋಚಕ ಪಂದ್ಯದಲ್ಲಿ ಗೆದ್ದ ಖುಷಿಯಲ್ಲಿದ್ದ ಆರ್​ಸಿಬಿ ಆಟಗಾರರು ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು. ಆರ್​ಸಿಬಿ ಆಟಗಾರರನ್ನು ಕಾಯದೇ ಮಹೇಂದ್ರ ಸಿಂಗ್ ಧೋನಿ ಪೆವಿಲಿಯನ್​ನತ್ತ ಮರಳಿದ್ದಾರೆ. ಈ ವೇಳೆ ಎದುರಿಗೆ ಸಿಕ್ಕ ಆರ್​ಸಿಬಿ ಸಿಬ್ಬಂದಿಗಳಿಗೆ ಹಸ್ತಲಾಘವ ನೀಡುವ ಮೂಲಕ ಧೋನಿ ಡ್ರೆಸ್ಸಿಂಗ್ ರೂಮ್​ಗೆ ಹೋಗಿದ್ದಾರೆ.  ಆರ್​ಸಿಬಿ ಆಟಗಾರರಿಗೆ ಧೋನಿ ಶೇಕ್ ಹ್ಯಾಂಡ್ ನೀಡದೇ ತೆರಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  ಧೋನಿ ಹೀಗೆ ಮಾಡಬಾರದಿತ್ತು. ನಾವು ನಿಮ್ಮಿಂದ ಇದನ್ನು ನೀರಿಕ್ಷೆ ಮಾಡಿರಲಿಲ್ಲ.. ಸೋತಾಗ ನೋವು ಇರುತ್ತದೆ ಬಿಡಿ ಹೀಗಾಗಿ ಹಾಗೆ ಹೋಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ. ಒಟ್ಟರೆಯಾಗಿ ಧೋನಿ ಆರ್​​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದೆ ಇರುವ ವಿಡಿಯೋಗೆ ಮಾತ್ರ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.‘

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts