ಬಡವರು ಮೇಕೆಯಂತೆ ಶ್ರೀಮಂತರು ಹಂದಿಯಂತೆ!

Rameshkumar vvani
Published on

ಬೆಂಗಳೂರು: ಅಕ್ಷರಸ್ಥನಿಗೆ ಸಂಕುಚಿತ ಸ್ವಭಾವ ಇರುತ್ತದೆ, ಅನಕ್ಷರಸ್ಥನಿಗೆ ಸಂಕುಚಿತ ಸ್ವಭಾವ ಇರಲ್ಲ. ಬಡವ ನಾಚಿಕೆ, ಸ್ವಾಭಿಮಾನ ಜಾಸ್ತಿ. ಮೇಕೆ ಹುಲ್ಲು ಮೇಯುತ್ತೆ, ಹಂದಿ ಏನು ಮೇಯುತ್ತೆ? ಮೇಕೆ ಬಡವನಿದ್ದಂತೆ. ಹಂದಿ ಹೇಗಿರುತ್ತದೆ, ಸೈಜು ದೊಡ್ಡದು. ಶ್ರೀಮಂತರಿದ್ದಂತೆ ಎಂದು ಹಿರಿಯ ಶಾಸಕ ರಮೇಶ್​ ಕುಮಾರ್​ ಹೇಳಿದರು.

ವಿಧಾನಸೌಧದಲ್ಲಿ ಮಂಗಳವಾರ ಚುನಾವಣೆ ವ್ಯವಸ್ಥೆ ಕುರಿತು ಅನಕ್ಷರಸ್ಥರು ಮತ್ತು ಅನಕ್ಷಸ್ಥರ ನಡುವಿನ ವ್ಯತ್ಯಾಸದ ಬಗ್ಗೆ ಬಹಳ ಚರ್ಚೆಯಾಯಿತು. ಅನಕ್ಷರಸ್ಥರು- ಬಡವರು ಮತದಾನ ಮಾಡುತ್ತಾರೆ, ಅಕ್ಷರಸ್ಥರು ಮತದಾದನದಿಂದ ದೂರ ಉಳಿಯುತ್ತಾರೆ. ಕೆಲಸ ಮಾಡಿಸಿಕೊಳ್ಳಲು ಮಾತ್ರ ಬರುತ್ತಾರೆಂಬ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಮಾತನಾಡಿದ ರಮೇಶ್​ ಕುಮಾರ್​, ಅಕ್ಷರಸ್ಥನಿಗೆ ಸಂಕುಚಿತ ಸ್ವಭಾವ ಇರುತ್ತದೆ, ಅನಕ್ಷರಸ್ಥನಿಗೆ ಸಂಕುಚಿತ ಸ್ವಭಾವ ಇರಲ್ಲ. ಬಡವನಿಗೆ ನಾಚಿಕೆ, ಸ್ವಾಭಿಮಾನ ಜಾಸ್ತಿ. ಮೇಕೆ ಹುಲ್ಲು ಮೇಯುತ್ತೆ, ಹಂದಿ ಏನು ಮೇಯುತ್ತೆ? ಮೇಕೆ ಬಡವನಿದ್ದಂತೆ. ಹಂದಿ ಹೇಗಿರುತ್ತದೆ, ಸೈಜು ದೊಡ್ಡದು. ಶ್ರೀಮಂತರಿದ್ದಂತೆ ಎಂದರು.

ಹಾಗೆಯೇ ರಿಸರ್ವ್​ ಬ್ಯಾಂಕ್​ ಮಾಜಿ ಗೌರ್ನರ್​ ಬ್ಯಾಡ್​ ಲೋನ್​ ರೀಸ್ಟ್ರಕ್ಚರ್​ ಮಾಡುವ ಬಗ್ಗೆ ವ್ಯಾಖ್ಯಾನ ಮಾಡುತ್ತಾ, ಹಂದಿಗೆ ಲಿಫ್ಟಿಕ್​ ಬಳಿದರೆ ಅದು ಯುವ ರಾಣಿ ಆಗುತ್ತಾ? ಎಂದು ಹೇಳಿದ್ದರು. ಅದೇ ರೀತಿ ಇಲ್ಲಿ ವ್ಯತ್ಯಾಸ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net