

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿಯ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ ಭಾನುವಾರ ರಾತ್ರಿ ಇಬ್ಬರು ಮೃತಪಟ್ಟಿದ್ದಾರೆ.
ಚಳ್ಳಕೆರೆ ತಾಲೂಕಿನ ತಳಕು ಗ್ರಾಮ ಸಮೀಪದ ಬೋವಿ ಕಾಲನಿಯ ದೇವರಾಜ(43) ಮತ್ತು ಸುನೀಲ್(28) ಮೃತರು.
ನಿನ್ನೆ ರಾತ್ರಿ ಇಬರಿಬ್ಬರೂ ರೈಲ್ವೆ ಗೇಟ್ ದಾಟುವ ವೇಳೆ ಆಕಸ್ಮಿಕವಾಗಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕಣರ ದಾಖಲಾಗಿದೆ.