More

    ತಾವೇ ಕಟ್ಟಿಸಿದ್ದ ಕೃಷಿಹೊಂಡಕ್ಕೆ ಹಾರಿ 4 ಮಕ್ಕಳೊಂದಿಗೆ ಪ್ರಾಣಬಿಟ್ಟ ದಂಪತಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

    ಯಾದಗಿರಿ: ಜೂ.28ರ ಬೆಳಗ್ಗೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆ ನಡೆದು ಎರಡು ದಿನ ಕಳೆದರೂ ಆ ಗ್ರಾಮದ ಪ್ರತಿ ಮನೆಯಲ್ಲೂ ವಿಧಿಯೇ ನೀನೆಷ್ಟು ಕ್ರೂರಿ? ತಂದೆ-ತಾಯಿ ಜತೆ ಆ ನಾಲ್ವರು ಪುಟ್ಟ ಮಕ್ಕಳನ್ನೂ ಬಲಿ ಪಡೆದು ಬಿಟ್ಟೆಯಾ? ಎಂದು ಮಮ್ಮಲ ಮರುಗುತ್ತಿದ್ದಾರೆ.

    ಅಂದು, ಒಂದೇ ಕುಟುಂಬದ ಆರು ಜನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೀಮರಾಯ ಸುರಪುರ (45), ಇವರ ಪತ್ನಿ ಶಾಂತಮ್ಮ ಸುರಪುರ (36) ಮತ್ತು ಮಕ್ಕಳಾದ ಸುಮಿತ್ರಾ (12), ಶ್ರೀದೇವಿ (13), ಶಿವರಾಜ (9), ಲಕ್ಷ್ಮೀ (4) ಮೃತರು. ಕಳೆದ ತಿಂಗಳ ಹಿಂದಷ್ಟೇ ಹಿರಿಮಗಳನ್ನು ಮದುವೆ ಮಾಡಿದ್ದ ಭೀಮರಾಯ ದಂಪತಿ, ಉಳಿದ ಮಕ್ಕಳೊಂದಿಗೆ ತಾವೇ ತೋಡಿಸಿದ್ದ ಕೃಷಿ ಹೊಂಡಕ್ಕೆ ಹಾರಿ ದುರಂತ ಅಂತ್ಯ ಕಂಡ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಇದನ್ನೂ ಓದಿರಿ ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ

    ಅಂದು ಏನಾಯ್ತು?: ಭೀಮರಾಯ ಮತ್ತು ಕುಟುಂಬ ಸದಸ್ಯರು ಜೂ.28ರಂದು ಬೆಳಗ್ಗೆ ಜಮೀನಿಗೆ ಹೋದವರು ಮಧ್ಯಾಹ್ನವಾದರೂ ವಾಪಸ್​ ಬಂದಿರಲಿಲ್ಲ. ಭೀಮರಾಯನ ಸಹೋದರ ಕರೆ ಮಾಡಿದ್ದು, ಮೊಬೈಲ್ ಸ್ವಿಚ್ ​ಆಫ್ ಆಗಿತ್ತು. ಅನುಮಾನಗೊಂಡ ಕುಟುಂಬಸ್ಥರು ಹೊಲಕ್ಕೆ ಹೋಗಿ ನೋಡಿದಾಗ ಬಾವಿಯಲ್ಲಿ ಶವವಾಗಿದ್ದರು. ವಿಧಿಯ ಅಟ್ಟಹಾಸ ಎನ್ನಬೇಕೋ, ಹೆಮ್ಮಾರಿ ಕರೊನಾ ರುದ್ರನರ್ತನ ಮುಂದುವರಿದ ಭಾಗವೋ ತಿಳಿಯುತ್ತಿಲ್ಲ. ಮಾಡಿದ್ದ ಸಾಲ ತೀರಿಸುವ ಚಿಂತೆ ಜತೆಗೆ ಎದೆಯೊಡಲು ಬಗಿದು, ಸಂಭವನೀಯ ಮರ್ಯಾದೆ ಹಾಳಾಗುವ ಭಯಕ್ಕೆ ಆರು ಜನ ಬಲಿಯಾಗಿದ್ದಾರೆ.

    ಭೀಮರಾಯ ಸುರಪುರ ತನ್ನ ಪಾಲಿಗೆ ಬಂದಿದ್ದ ಜಮೀನನ್ನು ಸಾಲಕ್ಕಾಗಿಯೇ ಮಾರಾಟ ಮಾಡಿ ಒಂಬತ್ತು ವರ್ಷವಾಗಿದೆ. 20 ದಿನ ಹಿಂದೆ ಮೃತ ಭೀಮರಾಯನ ದೊಡ್ಡ ಮಗಳ ಮದುವೆ ಮಾಡಲಾಗಿತ್ತು. ಆತ ಸಂಭಾವಿತ. ನಾಲ್ಕು ಜನರೊಂದಿಗೆ ಬೆರೆಯುವಾತ. ಆತನಿಗೆ ಸಾಲವಿರುವ ಬಗ್ಗೆ ನನಗೇನೂ ಹೇಳಿಲ್ಲ. ನಮ್ಮೆದುರು ನಿಂತು ಮಾತಾಡಿಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎನ್ನುವಂತಿದ್ದ. ತಾಯಿ ಪಾಲಿಗೆ ಎಂದು ಇಟ್ಟಿದ್ದ ಹೊಲದಲ್ಲಿ ಕೃಷಿ ಹೊಂಡ ತೋಡಿಸಿ ತೋಟಗಾರಿಕೆ ಬೆಳೆ ಬೆಳೆಯುವ ಧಾವಂತದಲ್ಲಿದ್ದ. ಆದರೆ ಅದರಲ್ಲೂ ಕೈಸುಟ್ಟುಕೊಂಡಿದ್ದ. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ದಿಗ್ಭ್ರಾಂತರಾಗಿದ್ದೇವೆ ಎನ್ನುತ್ತಲೇ ಮೃತನ ಹಿರಿಯಣ್ಣ ಮಲ್ಲಿಕಾರ್ಜುನ ಭಾವುಕರಾದರು. ಇದನ್ನೂ ಓದಿರಿ ಹಸುವಿನ ಮೈ ತೊಳೆಯತ್ತಿರುವಾಗಲೇ ಬಾಲಕರಿಬ್ಬರ ದುರಂತ ಸಾವು!

    ಕೃಷಿ ಕಾಯಕ ಸಾಥ್ ನೀಡುತ್ತಿಲ್ಲ ಎಂದು ಆಗಾಗ್ಗೆ ಹೇಳುತ್ತಿದ್ದ ಭೀಮರಾಯ, ತೋಟಗಾರಿಕೆ ಕೃಷಿ ಮಾಡಲು ಮುಂದಾಗಿದ್ದ. ಆದರೆ ದುರಾದೃಷ್ಟವಶಾತ್ ಅದು ಕೂಡ ಕೈಕೊಟ್ಟಿತ್ತು. ಸ್ವಂತ ಜಮೀನು ಇಲ್ಲದ್ದರಿಂದ ಯಾವುದೇ ಬ್ಯಾಂಕ್​ನಿಂದ ಸಾಲ ಪಡೆದಿರಲಿಲ್ಲ. ಕೈಕಡ (ಖಾಸಗಿಯವರಿಂದ ಸಾಲ) ಮಾಡಿದ್ದ ಎಂದು ಹೇಳುತ್ತಾ ಮತ್ತೊಬ್ಬ ಸಹೋದರ ಪರಮಣ್ಣ ಸುರಪುರ ಕಣ್ಣೀರಿಟ್ಟರು.

    ಮರ್ಯಾದೆಗೆ ಅಂಜಿಯೇ ಆತ್ಮಹತ್ಯೆ ದಾರಿ ತುಳಿದಿದ್ದಾರೆ ಎಂದು ಸಂಬಂಧಿಕರು ಎದೆಬಡಿದುಕೊಂಡು ಅಳುತ್ತಿದ್ದರು. ಅಷ್ಟೊಂದು ತೊಂದರೆ ಇದ್ದಲ್ಲಿ ನಾಲ್ವರು ಸಹೋದರರಿದ್ದು, ಕಷ್ಟ ಹೇಳಿಕೊಂಡಿದ್ದಲ್ಲಿ ನಾವೇ ಒಂದು ಎಕರೆ ಜಮೀನು ಮಾರಿ ಕಟ್ಟುತ್ತಿದ್ದೆವು. ಯಾಕಪ್ಪ ಸಾಯುವ ನಿರ್ಧಾರ ಮಾಡಿಬಿಟ್ಟೆ ಎಂದು ಗೋಳಾಡುತ್ತಿದ್ದ ದೃಷ್ಯ ಮನಕಲಕುವಂತಿತ್ತು.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ಪೊಲೀಸ್​ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದರು. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲವೇ ಆತ್ಮಹತ್ಯೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

    ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್​ ಚಾಲಕ! ಮುಂದಾಗಿದ್ದು ದುರಂತ

    ಹೊಲದಲ್ಲಿ ಮೈಮರೆತ ಪ್ರೇಮಿಗಳು! ವಿಡಿಯೋ ಚಿತ್ರೀಕರಿಸಿ, ಮರಕ್ಕೆ ಕಟ್ಟಿ ಹಿಂಸಿಸಿದ ಜನ… ಬೆಚ್ಚಿಬೀಳಿಸುತ್ತೆ ಭಯಾನಕ ಘಟನೆ

    ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

    ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

    ನನ್ನನ್ನು ವಿಲನ್​ ಮಾಡ್ಬೇಡಿ, ಯಡಿಯೂರಪ್ಪ ವಿರುದ್ಧ ಮಾತಾಡಿದ್ರೆ ನಾವೇ ಸುಟ್ಟು ಹೋಗ್ತೀವಿ: ಸಿ.ಪಿ.ಯೋಗೇಶ್ವರ್​

    ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ಗಂಡ! ಪತ್ನಿಯ ಆ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts