More

    ದೇಶದ ಆರ್ಥಿಕತೆಗೆ ಕಾರ್ಮಿಕರೇ ಜೀವಾಳ

    ದೇವದುರ್ಗ: ಕಾರ್ಮಿಕರಿಲ್ಲದ ಸಮಾಜ, ಬದುಕು ಊಹಿಸಲಾಗದು. ದೇಶದ ಆರ್ಥಿಕತೆಗೆ ಕಾರ್ಮಿಕರೇ ಜೀವಾಳವಾಗಿದ್ದಾರೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹನುಮಂತ ಅನಂತರಾವ್ ಸಾತ್ವಿಕ ಹೇಳಿದರು.

    ಪಟ್ಟಣದ ಬಸ್ ಡಿಪೋದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಕಾರ್ಮಿಕ ಇಲಾಖೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.
    ಕಾರ್ಮಿಕರಿಗಾಗಿಯೇ ಹಲವು ಕಾನೂನುಗಳಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರದಿಂದ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳನ್ನು ಒದಗಿಸಲು ಹಾಗೂ ಜಾಗೃತಿ ಮೂಡಿಸಲು ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ. ಕಾನೂನು ಸೇವಾ ಸಮಿತಿಯಿಂದ ಕಾರ್ಮಿಕರಿಗೆ ಹಾಗೂ ವಿವಿಧ ಸ್ತರದ ಜನರಿಗೆ ಉಚಿತ ಕಾನೂನು ಅರಿವು-ನೆರವು ನೀಡಲಾಗುವುದು. ಯಾವುದೇ ಸಮಸ್ಯೆ, ತೊಡಕುಗಳಾದರೆ ಸೇವಾ ಸಮಿತಿ ಭೇಟಿಯಾಗಿ ಪರಿಹಾರ ಪಡೆಯಬಹುದು ಎಂದು ನ್ಯಾಯಾಧೀಶ ಹನುಮಂತ ಅನಂತರಾವ್ ಸಾತ್ವಿಕ ಹೇಳಿದರು.

    ವಕೀಲ ರವಿಕುಮಾರ ಪಾಟೀಲ್ ಅಳ್ಳುಂಡಿ ಕಾರ್ಮಿಕರ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಬಸವರಾಜ ಹೇಮನೂರು, ಡಿಪೋ ವ್ಯವಸ್ಥಾಪಕ ಪುಂಡಲಿಕ ಕೆ.ಜಾಧವ್, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಶರಣು ಡಿ., ಮಲ್ಪಪ್ಪ ದೊರೆ, ಅಮರೇಶ, ಸಂದೀಪ ಜಾಲಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts