

ಆನೇಕಲ್: 4 ಮಕ್ಕಳೊಂದಿಗೆ ಯಾದಗಿರಿಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ರಾಜ್ಯ ರಾಜಧಾನಿ ಸಮೀಪ ಸಂಭವಿಸಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ತಂದೆ ಮತ್ತು ಇಬ್ಬರು ಹೆಣ್ಣು ಮಕ್ಕಳು ನಿನ್ನೆ ರಾತ್ರಿ(ಮಂಗಳವಾರ) ನೇಣುಬಿಗಿದುಕೊಂಡು ಸತ್ತಿದ್ದಾರೆ. ನಾಗರಾಜ್, ಇವರ ಮಕ್ಕಳಾದ ಕೀರ್ತಿ ಮತ್ತು ಮೊನಿಷಾ ಮೃತ ದುರ್ದೈವಿಗಳು. ನಾಗರಾಜ್ರ ಪತ್ನಿ ಕಳೆದ ತಿಂಗಳು ಮಹಾಮಾರಿ ಕರೊನಾಗೆ ಬಲಿಯಾಗಿದ್ದರು. ಇದನ್ನೂ ಓದಿರಿ ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ
ಸತೀಶ್ ಪತ್ನಿ ಆಶಾ ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮದವರು. ತಿಂಗಳ ಹಿಂದೆ ಕರೊನಾಗೆ ಬಲಿಯಾಗಿದ್ದರು. ಪತ್ನಿಯನ್ನು ಕಳೆದುಕೊಂಡ ಪತಿ ಹಾಗೂ ಮಕ್ಕಳು ಮಾನಸಿಕವಾಗಿ ನೊಂದಿದ್ದರು. ಗಾರ್ವೆಂಟ್ಸ್ನಲ್ಲಿ ನೌಕರನಾಗಿದ್ದ ಸತೀಶ್ ಇತ್ತೀಚೆಗೆ ಕೆಲಸ ಬಿಟ್ಟಿದ್ದರು. ಮಗಳು ಕೀರ್ತಿ ಪ್ರಥಮ ಬಿಎಸ್ಸಿ ಓದುತ್ತಿದ್ದಳು. ಮೋನಿಷಾ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕೀರ್ತಿ ದ್ವಿತೀಯ ಪಿಯುಸಿಯಲ್ಲಿ ಶೇ.98 ಅಂಕಗಳಿಸಿದ್ದಳು. ಮೋನಿಷಾ ಉತ್ತಮ ನೃತ್ಯಗಾರ್ತಿ.
ಜು.29ರವರೆಗೂ ಮನೆಯಲ್ಲಿ ಸಂಬಂಧಿಕರಿದ್ದು, ಸಂಜೆ ಅವರವರ ಊರುಗಳಿಗೆ ತೆರಳಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತರ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ತಮಗೆ ಕೆಲವರು ಹಣ ನೀಡಬೇಕಾಗಿದ್ದು, ತಂದೆ-ತಾಯಿಗೆ ನೀಡುವಂತೆ ಡೆತ್ ನೋಟ್ನಲ್ಲಿ ಸತೀಶ್ ಬರೆದಿದ್ದಾರೆ. ಜೂ.30ರ ಮುಂಜಾನೆ ಮನೆಯ ಬಾಗಿಲು ತೆರೆಯದೇ ಇದ್ದಾಗ ಘಟನೆ ಬೆಳಕಿಗೆ ಬಂದಿದೆ. ಅತ್ತಿಬೆಲೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.