ಬೆಂಗಳೂರಿನಲ್ಲಿ ಮಕ್ಕಳನ್ನು ಕೊಂದು ಪ್ರಾಣ ಬಿಟ್ಟ ಟೆಕ್ಕಿ ಕುಟುಂಬ

bng death
Published on

ಬೆಂಗಳೂರು: ಮಕ್ಕಳನ್ನ ಕೊಂದು ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪತಿ ವೀರಾರ್ಜುನ ವಿಜಯ್ (31), ಪತ್ನಿ ಹೇಮಾವತಿ(25) ಹಾಗೂ 1 ವರ್ಷದ ಮಗು, ಮೂರು ವರ್ಷದ ಇಬ್ಬರು ಹೆಣ್ಣುಮಕ್ಕಳಾದ ಮೋಕ್ಷ ಮೇಘನಯನ, ಹಾಗೂ ಸೃಷ್ಟಿ ಸುನಯನ, ಮೃತ ಮಕ್ಕಳು. ಶೀಗೆಹಳ್ಳಿಯ ಸಾಯಿ ಗಾರ್ಡನ್ ಅಪಾರ್ಟ್ಮೆಂಟ್​​​ನಲ್ಲಿ ಘಟನೆ ನಡೆದಿದೆ.

ದಂಪತಿ ಮೂಲತಃ ಆಂಧ್ರದವರಾಗಿದ್ದಾರೆ. ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ವೀರಾರ್ಜುನ್. ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು.ಆದರೆ ಅದೇನಾಯ್ತೂ ಗೊತ್ತಿಲ್ಲ ಇಡೀ ಕುಟುಂಬವೇ ಪ್ರಾಣವನ್ನೆ ಕಳೆದುಕೊಂಡಿದೆ. ಪತ್ನಿ ಹಾಗೂ ಮಕ್ಕಳನ್ನ ಕೊಲೆಗೈದು ನಂತರ ವೀರಾರ್ಜುನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜುಲೈ 31 ರ ರಾತ್ರಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಇಂದು 12 ಘಂಟೆಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಭೇಟಿಕೊಟ್ಟ ಕಾಡುಗೋಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net