ಪುಳಿಯೋಗರೆ ತಿಂದು ಪ್ರಾಣ ಬಿಟ್ಟ ವಿದ್ಯಾರ್ಥಿ

Puliyogare
Published on

ಹೈದ್ರಾಬಾದ್​: ಯಾದಾದ್ರಿ ಜಿಲ್ಲೆಯ ಭುವನಗಿರಿ ಸಮಾಜ ಕಲ್ಯಾಣ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ.

ಪ್ರಶಾಂತ್ ಮೃತ ವಿದ್ಯಾರ್ಥಿ, ಯಾದಾದ್ರಿ ಜಿಲ್ಲೆಯ ಭುವನಗಿರಿ ಸಮಾಜ ಕಲ್ಯಾಣ ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ಸಂಭಿಸಿ ದುರಂತ ಸಂಭವಿಸಿದೆ.

ನಡೆದಿದ್ದೇನು?: ಇದೇ ತಿಂಗಳ 12ರಂದು ಸಮಾಜ ಕಲ್ಯಾಣ ವಸತಿ ಶಾಲೆಯಲ್ಲಿ ಬೆಳಗಿನ ಉಪಾಹಾರದಲ್ಲಿ ಪುಳಿಯೋಗರೆ ತಿಂದ 24 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಭುವನಗಿರಿ ಏರಿಯಾ ಆಸ್ಪತ್ರೆಯಲ್ಲಿ ಹಲವರು ಚಿಕಿತ್ಸೆ ಪಡೆದರು. ಗಂಭೀರ ಸ್ಥಿತಿಯಲ್ಲಿದ್ದವರನ್ನು ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ ಹೈದರಾಬಾದ್‌ನ ನಿಲೋಫರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪ್ರಶಾಂತ್ ಮೃತಪಟ್ಟಿದ್ದಾರೆ.

ಮೃತ ವಿದ್ಯಾರ್ಥಿಯು ಪೋಚಂಪಲ್ಲಿ ಮಂಡಲದ ಜಿಬ್ ಲಕ್ ಪಲ್ಲಿ ಗ್ರಾಮದ ನಿವಾಸಿಯಾಗಿದ್ದರು. ಮೃತನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭುವನಗಿರಿ ಸಮಾಜ ಕಲ್ಯಾಣ ವಸತಿ ಶಾಲೆಯ ವರದಿಗಾರ ಮತ್ತು ಪ್ರಾಂಶುಪಾಲರ ವಿರುದ್ಧ ಐಪಿಸಿ ಸೆಕ್ಷನ್ 153 ಎ, 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net