ಭಾರತೀಯರ ರಕ್ಷಣೆಗಾಗಿ ಯೂಕ್ರೇನ್​ನ ನೆರೆ ರಾಷ್ಟ್ರಗಳಿಗೆ ತೆರಳಲಿದ್ದಾರೆ ಕೇಂದ್ರದ ನಾಲ್ವರು ಸಚಿವರು! ತುರ್ತು ಸಭೆಯಲ್ಲಿ ನಿರ್ಣಯ

PM Modi
Published on

ನವದೆಹಲಿ: ಯೂಕ್ರೇನ್​ನಲ್ಲಿರುವ ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ದೇಶಕ್ಕೆ ವಾಪಸ್​ ಕರೆತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವರು ಮತ್ತು ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆದಿದ್ದು, ಕೇಂದ್ರದ ಕೆಲ ಸಚಿವರು ಯೂಕ್ರೇನ್​ನ ನೆರೆ ರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿನ ಸರ್ಕಾರಗಳ ಸಹಕಾರದೊಂದಿಗೆ ಯುದ್ಧಪೀಡಿತ ಯೂಕ್ರೇನ್​ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯೂಕ್ರೇನ್​ನಲ್ಲಿರುವ ಭಾರತೀಯರನ್ನು ಪೋಲೆಂಡ್​, ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮೂಲಕ ಭಾರತಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಆಪರೇಷನ್​ ಗಂಗಾ ಹೆಸರಿನ ಕಾರ್ಯಾಚರಣೆ ಮೂಲಕ ಯೂಕ್ರೇನ್​​ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.

ಇದೀಗ ಕೇಂದ್ರ ಸಚಿವರಾದ ಹರದೀಪ್​ ಸಿಂಗ್​ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್​ ರಿಜಿಜು, ವಿ.ಕೆ.ಸಿಂಗ್​ ತಂಡವನ್ನ ಯೂಕ್ರೇನ್​ನ ನೆರೆ ರಾಷ್ಟ್ರಗಳಿಗೆ ಕಳುಹಿಸಿ ಸಂಕಷ್ಟರಲ್ಲಿರುವ ಭಾರತೀಯರನ್ನ ಸುರಕ್ಷಿತವಾಗಿ ವಾಪಸ್​ ಕರೆತರುವ ಕೆಲಸಕ್ಕೆ ಭಾರತ ಯೋಚಿಸಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net