ತಾಯ್ನಾಡಿನ ರಕ್ಷಣೆಗಾಗಿ ರಷ್ಯಾ ವಿರುದ್ಧ ಯುದ್ಧಭೂಮಿಗೆ ಇಳಿದ ಯೂಕ್ರೇನ್​ನ ಬ್ಯೂಟಿ ಕ್ವೀನ್​!

Ukrainian beauty queen
Published on

ಕೀವ್​: ರಷ್ಯಾ ದಾಳಿಯಿಂದ ತಾಯ್ನಾಡನ್ನು ರಕ್ಷಿಸಲು ಯೂಕ್ರೇನ್​ನ ನಾಗರಿಕರು ಸ್ವಯಂ ಪ್ರೇರಿತವಾಗಿ ಯುದ್ಧಭೂಮಿಗೆ ಇಳಿದಿದ್ದಾರೆ. ಮದ್ವೆಯಾದ ಮರುದಿನವೇ ದೇಶ ರಕ್ಷಣೆಗಾಗಿ ನವಜೋಡಿ ಗನ್​ ಹಿಡಿದು ಯುದ್ಧಕ್ಕೆ ಹೋಗಿದೆ. ಇದೀಗ ಯೂಕ್ರೇನ್​ನ ಬ್ಯೂಟಿ ಗರ್ಲ್​ ಕೂಡ ರಷ್ಯಾ ಸೈನಿಕರ ವಿರುದ್ಧದ ಹೋರಾಟಕ್ಕೆ ಧುಮುಕಿದ್ದಾರೆ.

2015ರ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಉಕ್ರೇನ್‌ನ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದ ಬ್ಯೂಟಿ ಕ್ವೀನ್​ ಅನಸ್ತಾಸಿಯಾ ಲೆನ್ನಾ ಅವರು ರಷ್ಯಾದ ಆಕ್ರಮಣವನ್ನು ಎದುರಿಸಲು ಗನ್​ ಹಿಡಿದು ಯೂಕ್ರೇನ್​ ಮಿಲಿಟರಿ ಸೇರಿದ್ದಾರೆ ಎಂದು ವರದಿಯಾಗಿದೆ.

ಯೂಕ್ರೇನ್​ ಬ್ಯೂಟಿ ಗರ್ಲ್​ ಲೆನ್ನಾಗೆ ಇನ್​​ಸ್ಟಾಗ್ರಾಮ್​ನಲ್ಲಿ 89.7 ಸಾವಿರ ಫಾಲೋವರ್ಸ್​ ಇದ್ದಾರೆ. ಸೈನಿಕರು ರಸ್ತೆಮಾರ್ಗ ತಡೆಯುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಫೆ.16ರಂದು ಶೇರ್​ ಮಾಡಿದ್ದ ಲೆನ್ನಾ, ಇದೀಗ ರೈಫಲ್​ ಹಿಡಿದು ನಿಂತಿರುವ ತನ್ನ ಫೋಟೋವೊಂದನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್​ ಮಾಡಿದ್ದಾರೆ. ಪುರುಷರಂತೆ ಮಹಿಳೆಯರೂ ತನ್ನ ತಾಯ್ನಾಡನ್ನು ರಕ್ಷಿಸುತ್ತಾರೆ. ನಾನೂ ಹೋರಾಡುವೆ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net