

ಬೆಂಗಳೂರು: ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ರಷ್ಯಾದ ಮಾರಕ ದಾಳಿಗೆ ಯೂಕ್ರೇನ್ ಅಕ್ಷರಶಃ ನಲುಗಿದೆ. ತನ್ನ ತಾಯ್ನಾಡನ್ನು ರಕ್ಷಿಸಿಕೊಳ್ಳಲು ಅಲ್ಲಿನ ಜನ ಸ್ವಯಂ ಪ್ರೇರಿತವಾಗಿ ಯುದ್ಧಭೂಮಿಗೆ ಇಳಿದಿದ್ದಾರೆ. ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದೆ. ಈ ವೇಳೆ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ಪುಟ್ಟ ಬಾಲೆಯ ಧೈರ್ಯಕ್ಕೆ ಭೇಷ್ ಎನ್ನುತ್ತಾ, ರಷ್ಯಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ರೈಫಲ್ ಹಿಡಿದು ಬಂದ ಸೈನಿಕನೊಬ್ಬನಿಗೆ ನಮ್ಮ ದೇಶಕ್ಕೆ ಯಾಕ್ ಬಂದ್ರಿ ನೀವು ಎನ್ನುತ್ತಾ ಪ್ರತಿರೋಧ ಬಾಲಕಿ ವ್ಯಕ್ತಪಡಿಸಿದ್ದಾಳೆ. ಸೈನಿಕನಿಗೆ ಕೈ ತೋರಿಸುತ್ತಾ, ಹೊಡೆಯಲು ಯತ್ನಿಸಿ ಅಸಮಾಧಾನ ಹೊರಹಾಕಿದ್ದಾಳೆ. 19 ಸೆಕೆಂಡ್ ಇರುವ ವಿಡಿಯೋ ತುಣುಕು ಸಖತ್ ವೈರಲ್ ಆಗ್ತಿದೆ. ಇದು ಯೂಕ್ರೇನ್ನಲ್ಲಿ ದಾಳಿ ಮಾಡುತ್ತಿದ್ದ ರಷ್ಯಾ ದೇಶದ ಸೈನಿಕರೊಬ್ಬರ ಬಳಿ ಯೂಕ್ರೇನ್ ಬಾಲಕಿ ಯುದ್ಧಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪರಿ ಎನ್ನಲಾಗುತ್ತಿದೆ. ಕೆಲವರು ಇದು 9 ವರ್ಷದ ಹಳೇ ವಿಡಿಯೋ ಎಂದೂ ಹೇಳಿದ್ದಾರೆ. ಅದ್ಹೇನೆ ಇರಲಿ, ಯೂಕ್ರೇನ್ ಮೇಲೆ ರಷ್ಯಾ ಪಡೆ ಕ್ಷಿಪಣಿ ಹಾರಿಸುತ್ತಾ ಇಡೀ ಯೂಕ್ರೇನ್ ಅನ್ನು ಸ್ಮಶಾನ ಮಾಡಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಈ ವಿಡಿಯೋ ನೋಡಿದ್ರೆ ಮನಕಲಕುತ್ತೆ.