ಹಾವು ಕಚ್ಚಿ ತಂದೆ ಸಾವು: ನೋವಿನಲ್ಲೇ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮೂವರು ಪುತ್ರಿಯರು, ಫೋಟೋ ನೋಡಿ ಭಾವುಕರಾದ ನೆಟ್ಟಿಗರು

New Project (5)
Published on
ಶಿವಮೊಗ್ಗ: ಹಿಂದು ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳು ತಂದೆಯ ಅಂತ್ಯಸಂಸ್ಕಾರ ನೆರವೇರಿಸುವುದು ಅಪರೂಪ. ಆದರೆ ಶಿವಮೊಗ್ಗ ಹೊರವಲಯದಲ್ಲಿ ಮೂವರು ಪುತ್ರಿಯರು ಒಟ್ಟಿಗೆ ನಿಂತು ನೋವಿನಲ್ಲೇ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿ ಮಾದರಿಯಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ.

ಶಿವಮೊಗ್ಗದ ನಿದಿಗೆ ನಿವಾಸಿ, ಎಂಪಿಎಂ ಕಾರ್ಖಾನೆ ನಿವೃತ್ತ ಅಧಿಕಾರಿ ಆರ್.ಜಗನ್ನಾಥ ಅವರಿಗೆ ಡಿ.8ರಂದು ಹಾವು ಕಡಿತದಿಂದ ಮೃತಪಟ್ಟಿದ್ದರು. ಜಗನ್ನಾಥ ಅವರಿಗೆ ಗಂಡು ಮಕ್ಕಳಿರಲಿಲ್ಲ. ಮೂವರು ಪುತ್ರಿಯರಿದ್ದರು. ನಗರದ ರೋಟರಿ ಚಿತಾಗಾರದಲ್ಲಿ ಗುರುವಾರ ತಂದೆಯ ಚಿತೆಗೆ ಮೂವರು ಹೆಣ್ಣು ಮಕ್ಕಳೂ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ನಮನ ಸಲ್ಲಿಸಿದರು. ಮೂವರಲ್ಲಿ ಒಬ್ಬರು ಶಿಕ್ಷಕಿಯಾಗಿದ್ದಾರೆ.

ಅಪ್ಪನನ್ನು ಕಳೆದುಕೊಂಡ ನೋವಿನಲ್ಲೇ ಈ ಮೂವರು ಹೆಣ್ಣು ಮಕ್ಕಳು ತಂದೆಯ ಕಾರ್ಯ ನೆರವೇರಿಸಿದ್ದರ ಫೋಟೋ ನೋಡಿದ ಸಾರ್ವಜನಿಕರು ಹೆಣ್ಣಾಗಲೀ, ಗಂಡಾಗಲೀ ಮಕ್ಕಳು ಮಕ್ಕಳೇ. ಎಲ್ಲರೂ ಒಂದೇ. ಅಪ್ಪನ ನೆನಪು, ಅವರ ಪ್ರೀತಿ ನಿಮ್ಮೊಂದಿಗೆ ಸದಾ ಜೀವಂತ. ಎದೆಗುಂದದಿರಿ.. ಎಂದು ನೆಟ್ಟಿಗರು ಧೈರ್ಯ ತುಂಬುತ್ತಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net