ಕೊಕೇನ್ ಮಾತ್ರೆ ನುಂಗಿ ಸಿಕ್ಕಿಬಿದ್ದ ಸ್ಮಗ್ಲರ್..!

568419
Published on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ಮುಂದುವರಿದಿದೆ. ಇಥಿಯೋಪಿಯಾದಿಂದ ಬಂದಿದ್ದ ಪ್ರಯಾಣಿಕನ್ನು ತಪಾಸಣೆ ನಡೆಸಿದಾಗ 13 ಕೋಟಿ ರೂಪಾಯಿ ಮೌಲ್ಯದ ಕೊಕೇನ್​ ಮಾತ್ರೆಗಳು ಪತ್ತೆಯಾಗಿವೆ.

ಬಂಧಿತ ಸ್ಮಗ್ಲರ್ ಘಾನದಬಾಹ್ ಅಂಪಾಡು ಕ್ವಾಡ್ವೋ (53) ಹೊಟ್ಟೆಯೊಳಗೆ ಕೊಕೇನ್​ ಕ್ಯಾಪ್ಸುಲ್ ನುಂಗಿದ್ದ. ಅಡಿಸ್ ಅಬಾಬ ವಿಮಾನ ನಿಲ್ದಾಣದಲ್ಲಿ ಕೊಕೇನ್ ಮಾತ್ರೆಗಳನ್ನು ನುಂಗಿದ್ದಾನೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಬಂದಿಳಿದಿದ್ದಾನೆ. ಈ ವೇಳೆ ಅನುಮಾನಗೊಂಡ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪರೀಕ್ಷಿಸಿದ್ದಾರೆ.

ವಶಕ್ಕೆ ಪಡೆದು ಪರೀಕ್ಷಿಸಿದಾಗ ಕಸ್ಟಮ್ಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಬಂಧಿತನನ್ನು ತೀವ್ರ ತಪಾಸಣೆ ನಡೆಸಿದಾಗ 104 ಕೊಕೇನ್ ಮಾತ್ರೆಗಳನ್ನು ನುಂಗಿರುವುದು ಪತ್ತೆಯಾಗಿದೆ. ಒಟ್ಟು 1.2 ಕೆ.ಜಿ ಕೊಕೇನ್ ಮಾತ್ರೆಗಳನ್ನು ಹೊಟ್ಟೆಯೊಳಗಿರಿಸಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net