

ಬೆಳಗಾವಿ: ದೇಶದಲ್ಲಿ ಪಿಎಫ್ಐ ಬೆಳೆಯಲು ಕುಮ್ಮಕ್ಕು ನೀಡಿದ್ದೇ ಕಾಂಗ್ರೆಸ್ ಪಕ್ಷ. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಪಿಎಫ್ಐ ಮೇಲೆ ದಾಖಲಾಗಿದ್ದ ಕೇಸ್ ವಾಪಾಸ್ ಪಡೆದುಕೊಂಡರು. ಕಾಂಗ್ರೆಸ್ನ ಈ ನಿರ್ಧಾರ ಪಿಎಫ್ಐಗೆ ಬಲ ಬಂದಿತು. ದೇಶ ವಿರೋಧ ಕೆಲಸ ಮಾಡಿದ್ರು ಕಾಂಗ್ರೇಸ್ ಸರ್ಕಾರ ನಮ್ಮ ಬೆನ್ನಿಗಿದೆ ಎಂಬುವುದು ಪಿಎಫ್ಐಗೆ ಅರಿವಾಯಿತು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದರು.
ಪಿಎಫ್ಐ ದೇಶ, ಸಮಾಜ ವಿರೋಧಿ ಹಾಗೂ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ಸಂಘಟನೆ. ಇವತ್ತು ಸಿಕ್ಕ ದಾಖಲೆಗಳ ಆಧಾರ ನೋಡಿದರೆ, ಇನ್ನೊಂದೆರೆಡು ವರ್ಷದಲ್ಲಿ ಇಡೀ ದೇಶವನ್ನೆ ಅಲ್ಲೋಲ ಕಲ್ಲೋಲ ಮಾಡುವ ಶಕ್ತಿ ಬೆಳೆಸಿಕೊಂಡಿದ್ದಾರೆ ಎಂದರು.
ಹಿಂದೆ ಪಿಎಫ್ಐ ಪದಾಧಿಕಾರಿಗಳ ಮೇಲೆ ಕೇಸ್ ಹಾಕಿದ್ದಾಗ, ಸುಮಾರು 2000 ಕ್ಕಿಂತ ಹೆಚ್ಚು ಕೇಸ್ಗಳನ್ನು ಆಗಿನ ಸಿಎಂ ಸಿದ್ದರಾಮಯ್ಯ ಹಿಂತೆಗೆದುಕೊಂಡರು. ಇವತ್ತು ಕರ್ನಾಟಕದಲ್ಲಿ ಪಿಎಫ್ಐ ಇಷ್ಟು ಬೆಳೆಯಲು ಕಾರಣ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದರು.
ಎನ್ಐಎ ಉತ್ತಮ ಕಾರ್ಯಾಚರಣೆ ಮಾಡಿ ಪಿಎಫ್ಐಯ ದೇಶದ್ರೋಹಿ ಕೆಲಸವನ್ನು ಮಟ್ಟ ಹಾಕುತ್ತಿದೆ. ಇದರಿಂದ ನಿಶ್ಚಿತವಾಗಿ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಶಾಸಕ ಅಭಯ್ ಪಾಟೀಲ.