

ನವ ದೆಹಲಿ: ಭಾರತದ ಕ್ರಿಕೆಟ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಗಾಯದಿಂದಾಗಿ ಏಷ್ಯಾಕಪ್ ಸರಣಿಯ ಅರ್ಧದಿಂದಲೇ ಹೊರನಡೆದಿದ್ದರು. ಶಸ್ತ್ರಚಿಕಿತ್ಸೆಯ ನಂತರ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕಟ್ ಅಕಾಡೆಮಿಯಲ್ಲಿರುವ ಜಡೇಜಾ, ಶಿಖರ್ ಧವನ್ ಜೊತೆಗೆ ರೀಲ್ಸ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಟ್ರೆಂಡಿಂಗ್ನಲ್ಲಿದೆ.
ಶಿಖರ್ ಧವನ್ ಶೇರ್ ಮಾಡಿರುವ ಈ ತಮಾಷೆಯ ವಿಡಿಯೋಗೆ ನೆಟ್ಟಿಗರು ಕೂಡಾ ತಾಮಾಷೆಯಾಗಿಯೇ ಕಮೆಂಟ್ ಮಾಡುತ್ತಿದ್ದಾರೆ. ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕಾರಣ ಜಡೇಜಾ ಎದ್ದು ಓಡಾಡುತ್ತಿಲ್ಲ. ಹೀಗಾಗಿ ಶಿಖರ್ ಧವನ್, ಜಡೇಜಾ ಮುಂದೆಯೇ ಡ್ಯಾನ್ಸ್ ಮಾಡಿ ಕಾಲೆಳೆದಿದ್ದಾರೆ.
ಶಿಖರ್ ಧವನ್ ಸದಾ ಒಂದಿಲ್ಲೊಂದು ತಾಮಾಷೆಯ ರೀಲ್ಸ್ ಮಾಡಿ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಹೆಚ್ಚಿನ ವಿಡಿಯೋಗಳಲ್ಲಿ ಸಹ ಅಟಗಾರರೂ ಕೂಡ ಕಾಣಿಸಿಕೊಳ್ಳುತ್ತಾರೆ. ಇದೀಗ ರವೀಂದ್ರ ಜಡೇಜಾ ಸರದಿ.
ಶಿಖರ್ ಧವನ್ ಶೇರ್ ಮಾಡಿರುವ ಈ ವಿಡಿಯೋದಲ್ಲಿ ಜಡೇಜಾ ಹಿಂದಿ ಡೈಲಾಗ್ಗೆ ಲಿಪ್ ಸಿಂಕ್ ಮಾಡಿದರೆ, ಶಿಖರ್ ಧವನ್ ಡ್ಯಾನ್ಸ್ ಮಾಡಿದ್ದಾರೆ. "Iski shaadi karwa dijiye, zimmedari ayegi to sudhar jayeja" ಎಂಬ ಡೈಲಾಗ್ಗೆ ಜಡೇಜಾ ಧ್ವನಿ ಸೇರಿಸಿದ್ದಾರೆ. ಇವರಿಬ್ಬರ ಈ ತಮಾಷೆಯ ರೀಲ್ಸ್ ಭಾರತೀಯ ತಂಡದ ಕ್ರಿಕೆಟ್ ಆಟಗಾರರು ಕಮೆಂಟ್ ಮಾಡಿದ್ದಾರೆ. ಬೌಲರ್ಗಳಾದ ಆರ್ಶದೀಪ್ ಸಿಂಗ್ ಹಾಗೂ ಖಲೀಲ್ ಅಹ್ಮದ್ ನಗುವ ಇಮೋಜಿ ಪೋಸ್ಟ್ ಮಾಡಿದ್ದಾರೆ.
ಶಿಖರ್ ಧವನ್ ಹಾಗೂ ರವೀಂದ್ರ ಜಡೇಜಾ ಮುಂಬರುವ ಟಿ-20 ವಿಶ್ವಕಪ್ನಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಸದ್ಯ ಇವರಿಬ್ಬರೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. (ಏಜೆನ್ಸೀಸ್)