

ನವದೆಹಲಿ: ಕೇವಲ 2 ತಿಂಗಳ ಅವಧಿಯಲ್ಲಿ ನಾಲ್ವರು ನೀಲಿ ಚಿತ್ರ ತಾರೆಯರು ದುರಂತವಾಗಿ ಮೃತಪಟ್ಟ ಸುದ್ದಿ ಪೋರ್ನ್ ಇಂಡಸ್ಟ್ರಿಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಅಷ್ಟಕ್ಕೂ ವಯಸ್ಕರ ಉದ್ಯಮದಲ್ಲಿ ಏನು ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ.
ಥೈನಾ ಫೀಲ್ಡ್ ಎಂಬಾಕೆ ಜನವರಿ 6ರಂದು ಮೃತಪಟ್ಟರೆ, ಜಸ್ಸಿ ಜಾನೆ, ಜನವರಿ 24ರಂದು ಕೊನೆಯುಸಿರೆಳೆದರು. ಫೆಬ್ರವರಿ 15 ರಂದು ಕಾಗ್ನೇ ಲಿನ್ ಕಾರ್ಟರ್ ಹಾಗೂ ಮಾರ್ಚ್ 1ರಂದು ಸೋಫಿಯಾ ಲಿಯೋನ್ ಮೃತಪಟ್ಟಿದ್ದಾರೆ. ಎಲ್ಲರೂ ಕೂಡ ಕಿರಿಯ ವಯಸ್ಸಿನಲ್ಲೇ ಸಾವಿಗೀಡಾಗಿದ್ದಾರೆ. ಸೋಫಿಯಾ ಲಿಯೋನ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆಕೆಯ ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಪೆರು ಮೂಲದ ಥೈನಾ ಫೀಲ್ಡ್, ಜನವರಿ 6ರಂದು ತಮ್ಮ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆ ಬಳಿಕ ಆಕೆ ಮೃತಪಟ್ಟಿರುವುದು ದೃಢವಾಯಿತು. ಸಾವಿಗೂ ಕೆಲ ದಿನಗಳ ಹಿಂದಷ್ಟೇ ಪೋರ್ನ್ ಇಂಡಸ್ಟ್ರಿಯಲ್ಲಿ ನಡೆಯುವ ರಾಜಕೀಯ ವಿರುದ್ಧ ಥೈನಾ ಮಾತನಾಡಿದ್ದರು. ಜಸ್ಸಿ ಜಾನೆ ಡ್ರಗ್ಸ್ ಓವರ್ಡೋಸ್ ಆಗಿ ಸಾವಿಗೀಡಾದರು ಮತ್ತು ಕಾಗ್ನೆ ಲಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡರು.
ಇದೀಗ ಮತ್ತೊಬ್ಬ ಪೋರ್ನ್ ಸ್ಟಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಕೆಯ ಹೆಸರು ಎಮಿಲಿ ವಿಲ್ಲಿಸ್. ಕಳೆದ ತಿಂಗಳು ಹೃದಯಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮತ್ತೊಂದು ಹೃದಯಾಘಾತವಾಗಿ ಕೋಮಾಗೆ ಜಾರಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಂದೆ ಮೈಕೆಲ್ ವಿಲ್ಲಿಸ್ ಮಾಹಿತಿ ನೀಡಿದ್ದಾರೆ. ಸದ್ಯ ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಡ್ರಗ್ಸ್ ಓವರ್ಡೋಸ್ ಆಗಿ ಈ ರೀತಿ ಆಗಿದೆ ಎನ್ನಲಾಗಿದೆ. ಎರಡು ವರ್ಷಗಳ ಹಿಂದಷ್ಟೇ ಎಮಿಲಿ ಅಡಲ್ಟ್ ಇಂಡಸ್ಟ್ರಿ ತೊರೆದಿದ್ದಳು. ಆದರೆ, ಡ್ರಗ್ಸ್ಗೆ ದಾಸಳಾಗಿದ್ದರಿಂದ ಅನಾರೋಗ್ಯಕ್ಕೀಡಾಗಿದ್ದಳು. ಇದೀಗ ಆಕೆಯ ಸ್ಥಿತಿಯು ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಖ್ಯಾತ ನೀಲಿ ತಾರೆಯರು ಸಾಲು ಸಾಲಾಗಿ ಸಾಯುತ್ತಿರುವುದು ಪೋರ್ನ್ ಇಂಡಸ್ಟ್ರಿಯಲ್ಲಿ ತಲ್ಲಣ ಸೃಷ್ಟಿಸಿದೆ. ಇಂತಹ ನಟಿಯರು ಅಡಲ್ಟ್ ಕ್ಷೇತ್ರದಲ್ಲಿ ತಮ್ಮ ದೇಹ ಮತ್ತು ಭವಿಷ್ಯವನ್ನು ತ್ಯಾಗ ಮಾಡಿ ಕೇವಲ ಹಣಕ್ಕಾಗಿ ನಟಿಸುತ್ತಾರೆ. ಇದೇ ಸಮಯದಲ್ಲಿ ಈ ನಟಿಯರ ಮೇಲೆ ತೀವ್ರ ಒತ್ತಡ ಇರುತ್ತದೆ. ಈ ಕಾರಣದಿಂದ ಬಹುತೇಕ ನೀಲಿ ತಾರೆಯರು ಡ್ರಗ್ಸ್ ವ್ಯಸನಿಗಳಾಗುತ್ತಾರೆ.
ಇಂಡಸ್ಟ್ರಿ ಒಳಗಿನ ಸ್ಪರ್ಧೆ ಮತ್ತು ಇತರೆ ಕಾರಣಗಳಿಂದಾಗಿ ನೀಲಿ ತಾರೆಯರು ಅತಿಯಾದ ಒತ್ತಡದಲ್ಲಿ ಬದುಕುತ್ತಾರೆ. ಇದೇ ಸಮಯದಲ್ಲಿ ಡ್ರಗ್ಸ್ ಓವರ್ ಡೋಸ್ನಿಂದಾಗಿ ಆರೋಗ್ಯ ಹೆದಗೆಡುತ್ತದೆ. ಒಂದೆಡೆ ಆರೋಗ್ಯ ಸಮಸ್ಯೆ ಮತ್ತು ಒತ್ತಡದ ಬದುಕನ್ನು ತಾಳಲಾರದೇ ಕೆಲ ಪೋರ್ನ್ ಸ್ಟಾರ್ಗಳು ಸಾವಿನ ಹಾದಿ ಹಿಡಿಯುತ್ತಾರೆ. ಅದರಲ್ಲೂ ಕಿರಿಯ ವಯಸ್ಸಿನಲ್ಲಿ ಸಾವಿನ ಕದು ತಟ್ಟುತ್ತಿರುವುದರಿಂದ ಈ ಅಡಲ್ಟ್ ಇಂಡಸ್ಟ್ರಿಯಲ್ಲಿ ನಿಜವಾಗಿ ಏನಾಗುತ್ತಿದೆ ಎಂಬ ಅನುಮಾನ ಶುರುವಾಗಿದೆ. (ಏಜೆನ್ಸೀಸ್)