ಈ ಫೋಟೋದಲ್ಲಿರುವ ಪುಟ್ಟ ಬಾಲಕಿ ಇಂದು ಸ್ಯಾಂಡಲ್​ವುಡ್​ನ ಸ್ಟಾರ್​ ನಟಿ! ಯಾರೆಂದು ಪತ್ತೆ ಹಚ್ಚುವಿರಾ?

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರ ಸಾಕಷ್ಟು ಫೋಟೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಬಾಲ್ಯದ ಫೋಟೋಗಳು ಕೂಡ ಒಂದು. ನೆಚ್ಚಿನ ಕಲಾವಿದರ ಬಾಲ್ಯದ ಫೋಟೋಗಳನ್ನು ನೋಡಿ ಅಭಿಮಾನಿಗಳು ಒಂದು ಕ್ಷಣ ಅಚ್ಚರಿಗೀಡಾಗುತ್ತಾರೆ. ಏಕೆಂದರೆ, ಬಾಲ್ಯದಲ್ಲಿ ಇರುವ ರೀತಿಗೂ ಮತ್ತು ಈಗ ಇರುವ ರೀತಿಗೂ ತುಂಬಾ ವ್ಯತ್ಯಾಸ ಇರುತ್ತದೆ. ಒಮ್ಮೊಮ್ಮೆ ಗುರುತನ್ನು ಸಹ ಹಿಡಿಯಲಾಗದು. ಅದೇ ರೀತಿ ಜಾಲತಾಣದಲ್ಲಿ ಇದೀಗ ಫೋಟೋವೊಂದು ಹರಿದಾಡುತ್ತಿದೆ. ಆ ಫೋಟೋ ಸ್ಯಾಂಡಲ್​ವುಡ್​ ನಟಿಯ ಬಾಲ್ಯದ ಫೋಟೋ ಆಗಿದ್ದು, ಆ ನಟಿ ಯಾರೆಂದು ಪತ್ತೆಹಚ್ಚಬೇಕು.

ಸುಮಾರು ಎರಡ್ಮೂರು ವರ್ಷದಲ್ಲಿರುವಾಗ ತೆಗೆಸಿದ ಫೋಟೋದಂತಿದೆ. ತುಂಬಾ ಕ್ಯೂಟ್​ ಆಗಿರುವ ಪುಟ್ಟ ಬಾಲಕಿ ಇಂದು ಸ್ಯಾಂಡಲ್​ವುಡ್​ನ ಸ್ಟಾರ್​ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ತಮಿಳು ಮತ್ತು ತೆಲುಗಿನಲ್ಲೂ ಅಭಿನಯಿಸಿದ್ದಾರೆ. ಯಾರೆಂದು ನಿಮಗೆ ಗೊತ್ತಾಯಿತಾ? ಗೊತ್ತಾದಲ್ಲಿ ಕಾಮೆಂಟ್​ ಮೂಲಕ ನಮಗೆ ತಿಳಿಸಿ. ಗೊತ್ತಾಗದೇ ಯಾರೆಂದು ಕನ್ಫ್ಯೂಸ್​ ಆಗಿದ್ದೀರಾ? ಯಾರಿರಬಹುದೆಂದು ಯೋಚಿಸುತ್ತಿದ್ದೀರಾ? ತುಂಬಾ ಯೋಚಿಸಲು ಹೋಗಬೇಡಿ, ಪುಟ್ಟ ಬಾಲಕಿ ಯಾರೆಂದು ನಾವೇ ಹೇಳಿಬಿಡುತ್ತೇವೆ.

ಫೋಟೋದಲ್ಲಿ ಕ್ಯೂಟ್​ ಆಗಿ ಕಾಣುವ ಪುಟ್ಟ ಬಾಲಕಿ ಬೇರೆ ಯಾರೂ ಅಲ್ಲ, ಸ್ಯಾಂಡಲ್​ವುಡ್​ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್​. ಆಶಿಕಾ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳಬೇಕಿಲ್ಲ. ಏಕೆಂದರೆ, ಆಶಿಕಾ ಬಗ್ಗೆ ಹೇಳುತ್ತಿದ್ದಂತೆ ಮನಸ್ಸು ಚುಟು ಚುಟು ಅನುತೈತಿ ಎನ್ನುತ್ತಾರೆ ಅಭಿಮಾನಿಗಳು. ತಮ್ಮ ಸಹಜ ಸೌಂದರ್ಯ ಹಾಗೂ ಮಾದಕ ನೋಟದಿಂದಲೇ ಆಶಿಕಾ ಸಿನಿ ರಸಿಕರ ಹೃದಯ ಗೆದ್ದಿದ್ದಾರೆ.

Ashika 1

ಕ್ರೇಜಿ ಬಾಯ್​ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಆಶಿಕಾ, ಮಾಸ್​ ಲೀಡರ್​, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರ್ಯಾಂಬೋ 2, ತಾಯಿಗೆ ತಕ್ಕೆ ಮಗ, ಮದಗಜ, ಅವತಾರ ಪುರುಷ, ರೆಮೋ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್​ ನಟನೆಯ ಕೋಟಿಗೊಬ್ಬ 3 ಮತ್ತು ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೆಯ ಸಿನಿಮಾ ಜೇಮ್ಸ್​ನಲ್ಲಿ ವಿಶೇಷ ಹಾಡಿಗೆ ಆಶಿಕಾ ಹೆಜ್ಜೆ ಹಾಕಿದ್ದಾರೆ.

ಈ ಫೋಟೋದಲ್ಲಿರುವ ಪುಟ್ಟ ಬಾಲಕಿ ಇಂದು ಸ್ಯಾಂಡಲ್​ವುಡ್​ನ ಸ್ಟಾರ್​ ನಟಿ! ಯಾರೆಂದು ಪತ್ತೆ ಹಚ್ಚುವಿರಾ?

ಕನ್ನಡ ಮಾತ್ರವಲ್ಲದೆ ಪರಭಾಷೆಯ ಸಿನಿ ರಸಿಕರನ್ನೂ ಆಶಿಕಾ ಸೆಳೆಯುತ್ತಿದ್ದಾರೆ. ತಮಿಳಿನಲ್ಲಿ ಪಟ್ಟತ್ತು ಅರಸನ್​ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಆಮಿಗೋಸ್​ ಮತ್ತು ನಾ ಸಾಮಿ ರಂಗ ಚಿತ್ರದಲ್ಲಿ ನಟಿಸಿದ್ದಾರೆ. ನಾ ಸಾಮಿ ರಂಗ ಚಿತ್ರದಲ್ಲಿ ಟಾಲಿವುಡ್​ ಸೂಪರ್​ಸ್ಟಾರ್​ ನಾಗಾರ್ಜುನ್​ ಜತೆ ನಟಿಸುವ ಮೂಲಕ ಆಶಿಕಾ ಸೈ ಎನಿಸಿಕೊಂಡಿದ್ದಾರೆ.

ಈ ಫೋಟೋದಲ್ಲಿರುವ ಪುಟ್ಟ ಬಾಲಕಿ ಇಂದು ಸ್ಯಾಂಡಲ್​ವುಡ್​ನ ಸ್ಟಾರ್​ ನಟಿ! ಯಾರೆಂದು ಪತ್ತೆ ಹಚ್ಚುವಿರಾ?

ಆಶಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಗತವೈಭವ ಮತ್ತು ಅವತಾರ ಪುರುಷ 2 ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

ಬರೋಬ್ಬರಿ 30 ಯುವಕರಿಗೆ ವಂಚಿಸಿದ ಮಾಯಾಂಗನೆ! ಕಳಚಿಬಿತ್ತು ಲೇಡಿ ಪೊಲೀಸ್​ ಮುಖವಾಡ

VIDEO| ಮಹಾಶಿವರಾತ್ರಿಯಂದು ಅಪ್ಪು ನೆನೆದು ಭಾವುಕರಾದ ಸದ್ಗುರು

Share This Article

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ