ಮಾಟ ಮಂತ್ರ ಮಾಡಿದ್ದಾನೆಂದು ಶಂಕಿಸಿ, ಟೆಕ್ಕಿಯನ್ನು ಜೀವಂತ ದಹನ ಮಾಡಿದ ಸಂಬಂಧಿ

blackmagic
Published on

ಹೈದರಾಬಾದ್: ಪ್ರಪಂಚ ತಾಂತ್ರಿಕವಾಗಿ ಅದೆಷ್ಟೇ ಅಭಿವೃದ್ಧಿ ಕಂಡಿರಬಹುದು ಆದರೆ ಮಾಟ ಮಂತ್ರದಂತಹ ಅನಿಷ್ಟ ಪದ್ಧತಿಗಳು ಮಾತ್ರ ನಮ್ಮನ್ನು ಬಿಟ್ಟು ದೂರಾಗಿಲ್ಲ. ದೂರದ ಊರಲ್ಲಿ ಟೆಕ್ಕಿಯಾಗಿ ದುಡಿಯುತ್ತಿರುವ ಸಂಬಂಧಿಯೊಬ್ಬ ತನಗೆ ಮಾಟ ಮಂತ್ರ ಮಾಡಿರಬಹುದು ಎನ್ನುವ ಶಂಕೆಯಿಂದಲೇ ಆತನನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ರಾಜ್ಯದ ಜಗ್ತಿಯಲ್​ ಜಿಲ್ಲೆಯ 38 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್​ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸದ್ಯ ತನ್ನೂರಿನಲ್ಲಿದ್ದ ಆತ ಸೋಮವಾರ ಸಂಜೆ ಮಲಯಾಳ ಮಂಡಲದಲ್ಲಿರುವ ತಮ್ಮ ಸಂಬಂಧಿಯೊಬ್ಬರನ್ನು ನೋಡಲು ತೆರಳಿದ್ದಾನೆ. ಈ ಟೆಕ್ಕಿ ನನ್ನ ಮೇಲೆ ಮಾಟ ಮಂತ್ರ ಮಾಡಿದ್ದಾನೆ ಎಂದು ಶಂಕಿಸಿದ್ದ ಸಂಬಂಧಿ ಟೆಕ್ಕಿಯನ್ನು ಸಜೀವ ದಹನ ಮಾಡಿದ್ದಾನೆ.

ಈ ಸಂಬಂಧ ಟೆಕ್ಕಿಯ ತಂದೆ ಪೊಲೀಸ್​ ಪ್ರಕರಣ ದಾಖಲಿಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ತನಿಖೆಯ ನಂತರವೇ ಹೊರಬರಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net