More

    ಗೋಮಾತಾ ಉಲರ್ಥ್​ ಮಾಡಿ ಸವಿದಿದ್ದ ಕೇರಳ ಯುವತಿಗೆ ಎದುರಾಯ್ತು ಸಂಕಷ್ಟ

    ತಿರುವನಂತಪುರಂ: ಹಿಂದೂ ಸಂಪ್ರದಾಯದಲ್ಲಿ ಗೋ ಮಾತೆಗೆ ಅತ್ಯಂತ ಶ್ರೇಷ್ಠ ಸ್ಥಾನವಿದೆ. ಯಾವುದೇ ಧರ್ಮದ ಧಾರ್ಮಿಕ ಸಂಪ್ರದಾಯಗಳು ಮತ್ತು ನಂಬಿಕೆಗಳಿಗೆ ಗೌರವ ನೀಡಬೇಕಾಗಿರುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಆದರೆ ಕೆಲವು ವಿಕೃತ ಮನಸ್ಸುಗಳು ಬೇರೆ ಧರ್ಮದ ನಿಂದನೆಯಲ್ಲೇ ತಮ್ಮ ಜೀವನವನ್ನು ಕಳೆದುಬಿಡುತ್ತಾರೆ. ಹಿಂದೂ ಧರ್ಮದಲ್ಲಿ ಪವಿತ್ರವೆಂದು ನಂಬುವ ಗೋ ಮಾತೆಯ ಖಾದ್ಯವನ್ನು ಮಾಡಿ ಸವಿದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಯುವತಿಯೊಬ್ಬಳಿಗೆ ಇದೀಗ ಸಂಕಷ್ಟ ಎದುರಾಗಿದೆ.

    ಇದನ್ನೂ ಓದಿ: ಹೆಂಡತಿ, ಮಗ, ಸೊಸೆ, ಮೊಮ್ಮಗುವನ್ನು ಕೊಂದು, ಅಮ್ಮನೊಂದಿಗೆ ಪರಾರಿಯಾದ! ದಾರಿ ಮಧ್ಯೆ ಎದುರಾದ ಜವರಾಯ

    ಕೇರಳದ ರೆಹಾನಾ ಫಾತಿಮಾ ಹೆಸರಿನ ಯುವತಿ ತನ್ನ ಅಡುಗೆ ಶೋನಿಂದ ವಿವಾದಕ್ಕೀಡಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಇರುವ ಫಾತಿಮಾ ಕೆಲ ವರ್ಷದಿಂದ ಅಡುಗೆ ಶೋ ಮಾಡಿಕೊಂಡು ಬಂದಿದ್ದಾರೆ. ಅವರದ್ದೇ ಆದ ಯೂಟ್ಯೂಬ್​ ಚಾನೆಲ್​ ಕೂಡ ಹೊಂದಿದ್ದಾರೆ. ಅವರು ಇತ್ತೀಚೆಗೆ ಪೋಸ್ಟ್​ ಮಾಡಿದ ವಿಡಿಯೋವೊಂದು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಫಾತಿಮಾ ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ ‘ಗೋಮಾತಾ ಉಲರ್ಥ್​’ ಹೆಸರಿನ ಖಾದ್ಯ ತಯಾರಿಸುತ್ತಿರುವುದಾಗಿ ಹೇಳಿದ್ದರು. ದೇಶದಲ್ಲಿ ಗೋಮಾತಾ ಎಂದು ಕರೆಯುವುದು ಗೋವುಗಳಿಗೆ ಮಾತ್ರ. ಹಾಗೂ ಆ ಹೆಸರನ್ನು ಹಿಂದೂಗಳು ಅತ್ಯಂತ ಶ್ರೇಷ್ಠ ಭಾವದಿಂದ ನೋಡುತ್ತಾರೆ. ಗೋ ಮಾಂಸದ ಖಾದ್ಯ ತಯಾರಿಸಿದ್ದಷ್ಟೇ ಅಲ್ಲದೆ ಅದಕ್ಕೆ ಗೋಮಾತಾ ಹೆಸರು ಇಟ್ಟಿದ್ದರ ವಿರುದ್ಧ ಅನೇಕ ಹಿಂದೂಗಳು ಧ್ವನಿ ಎತ್ತಿದ್ದರು.

    ಇದನ್ನೂ ಓದಿ: ರಾತ್ರಿ ನಾಯಿ ಕೂಗದೇ ಇದ್ದಿದ್ದರೆ ಅವರ್ಯಾರೂ ಬದುಕುತ್ತಲೇ ಇರಲಿಲ್ಲ; ಪ್ರಾಣವನ್ನೇ ಪಣಕ್ಕಿಟ್ಟ ಗರ್ಭಿಣಿ ನಾಯಿ

    ಈ ವಿಚಾರವಾಗಿ ಕೇರಳ ಹೈ ಕೋರ್ಟ್​ ವಿಚಾರಣೆ ನಡೆಸಿದೆ. ಯಾವುದೇ ಭಕ್ತನ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುವಂತೆ ಕೆಲಸ ಮಾಡುವುದು ಕಾನೂನಿನಲ್ಲಿ ಅಪರಾಧವಾಗುತ್ತದೆ. ಇದೀಗ ಫಾತಿಮಾ ಅವರು ಅದೇ ತಪ್ಪನ್ನು ಮಾಡಿದ್ದಾರೆ. ಗೋಮಾತಾ ಎನ್ನುವ ಹೆಸರಿಗೆ ಗೋವಿನ ಅರ್ಥ ಬಿಟ್ಟು ಬೇರೆ ಅರ್ಥ ನಮ್ಮಲ್ಲಿಲ್ಲ ಎಂದು ನ್ಯಾಯಮೂರ್ತಿ ಸುನಿಲ್ ಅವರ ಏಕ-ನ್ಯಾಯಾಧೀಶರ ಪೀಠ ಹೇಳಿದೆ. ಫಾತಿಮಾ ಅವರು ಈ ಹಿಂದೆ ಶಬರಿಮಲೆ ದೇವಸ್ಥಾನದ ವಿಚಾರವಾಗಿಯೂ ಹಿಂದೂಗಳ ನಂಬಿಕೆಗೆ ಧಕ್ಕೆ ತಂದಿದ್ದು ಅವರ ವಿರುದ್ಧ ಜಾಮೀನು ಷರತ್ತು ವಿಧಿಸಲಾಗಿತ್ತು. ಇದೀಗ ಆ ಷರತ್ತನ್ನು ಅವರು ಉಲ್ಲಂಘಿಸಿರುವುದನ್ನು ನ್ಯಾಯಾಲಯ ಗಮನಿಸಿರುವುದಾಗಿ ತಿಳಿಸಿದೆ. (ಏಜೆನ್ಸೀಸ್​)

    ನಾಯಿ ಬೊಗಳಿದ್ದಕ್ಕೆ 25 ವರ್ಷದ ಯುವಕನ ಪ್ರಾಣವೇ ಹೋಯಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts