ನಾಯಿ ಬೊಗಳಿದ್ದಕ್ಕೆ 25 ವರ್ಷದ ಯುವಕನ ಪ್ರಾಣವೇ ಹೋಯಿತು!

dog
Published on

ಲಖನೌ: ಕೋಪದ ಕೈಗೆ ಬುದ್ಧಿ ಕೊಡಬಾರದು ಎನ್ನುತ್ತಾರೆ. ಜೀವನದಲ್ಲಿ ಎಂದಿಗೂ ಸರಿ ಮಾಡಲಾಗದ ಅನಾಹುತಗಳಿಗೆ ಕೋಪ ದಾರಿ ಮಾಡಿಕೊಡುತ್ತದೆ. ಅಂತಹ ಕೆಟ್ಟ ಕೋಪಕ್ಕೆ ಬುದ್ಧಿ ಕೊಟ್ಟ ಮೂವರು ಯುವಕರು ಓರ್ವ ಯುವಕನ ಜೀವನವನ್ನೇ ಮುಗಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸಿಧೌಲಿ ಪ್ರದೇಶದ ಕುಮಾರ್​ (25) ಇತ್ತೀಚೆಗೆ ತನ್ನ ಸಾಕುನಾಯಿಯನ್ನು ವಾಕಿಂಗ್​​ ಕರೆದುಕೊಂಡು ಹೊರಟಿದ್ದ. ಖಾಲಿ ರಸ್ತೆಯಲ್ಲಿ ಆತ ಹೋಗುತ್ತಿದ್ದಾಗ ಮೂರು ಜನ ಯುವಕರ ಗುಂಪು ಆತನನ್ನು ಅಡ್ಡ ಹಾಕಿದೆ. ಆಗ ಕುಮಾರ್​ ಜತೆಗಿದ್ದ ನಾಯಿ ಜೋರಾಗಿ ಬೊಗಳಲಾರಂಭಿಸಿದೆ. ನಾಯಿ ಬೊಗಳಿದ್ದರಿಂದಾಗಿ ಸಿಟ್ಟಿಗೆದ್ದ ಯುವಕರ ಗುಂಪು ಕುಮಾರ್​ಗೆ ಚಾಕುವಿನಿಂದ ಚುಚ್ಚಿದೆ. ನೋವಿನಿಂದ ಕುಮಾರ್​ ಕೂಗಲಾರಂಭಿಸಿದಾಗ ಆತನ ಇಬ್ಬರು ಸಹೋದರರಾದ ಸೋನು ಮತ್ತು ಸುನಿಲ್​ ಮನೆಯಿಂದ ಓಡಿ ಬಂದು ರಕ್ಷಣೆಗೆ ಮುಂದಾಗಿದ್ದಾರೆ. ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ರಕ್ಷಣೆಗೆ ಮುಂದಾದ ಹಿನ್ನೆಲೆಯಲ್ಲಿ ಅಲ್ಲಿಂತ ಓಡಿ ಹೋಗಿದ್ದಾರೆ.

ಮೂವರು ಸಹೋದರರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಕುಮಾರ್​ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಸದ್ಯ ಇಬ್ಬರು ಸಹೋದರರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸ್​ ಪ್ರಕರಣ ದಾಖಲಾಗಿದೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net