ಹೆಂಡತಿ, ಮಗ, ಸೊಸೆ, ಮೊಮ್ಮಗುವನ್ನು ಕೊಂದು, ಅಮ್ಮನೊಂದಿಗೆ ಪರಾರಿಯಾದ! ದಾರಿ ಮಧ್ಯೆ ಎದುರಾದ ಜವರಾಯ

Murder
Published on

ಲುಧಿಯಾನ: ಮನೆಯ ಮುಖ್ಯಸ್ಥನೇ ಕುಟುಂಬುದವರನ್ನೆಲ್ಲ ಕೊಂದು, ಪರಾರಿಯಾಗಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಈ ರೀತಿ ಪರಾರಿಯಾಗುತ್ತಿದ್ದ ವ್ಯಕ್ತಿ ಕೂಡ ಅಪಘಾತಕ್ಕೆ ಒಳಗಾಗಿದ್ದಾಗಿ ವರದಿಯಾಗಿದೆ.

ಪಂಜಾಬ್​ನ ಲುಧಿಯಾನ ನಗರದ ಮಯೂರ್​ ವಿಹಾರ್​ನಲ್ಲಿ ಈ ಘಟನೆ ನಡೆದಿದೆ. ರಾಜೀವ್​ ಸೋಂಡಾ ಹೆಸರಿನ ವ್ಯಕ್ತಿ ಆರೋಪಿ. ಆತ ತನ್ನ ಪತ್ನಿ, ಮಗ, ಸೊಸೆ ಮತ್ತು ಮೊಮ್ಮಗುವನ್ನು ಹರಿತವಾದ ವಸ್ತುವಿನಿಂದ ಇರಿದು ಕೊಂದಿದ್ದಾನೆ. ನಂತರ ತನ್ನ ತಾಯಿಯೊಂದಿಗೆ ಪರಾರಿಯಾಗಿದ್ದಾನೆ.

ಈ ರೀತಿ ಪರಾರಿಯಾಗುವಾಗ ರಾಜೀವ್​ ಮತ್ತು ಆತನ ತಾಯಿ ಅಪಘಾತಕ್ಕೆ ಒಳಗಾಗಿದ್ದಾರೆ. ರಾಜೀವ್​ ಓಡಿಸುತ್ತಿದ್ದ ಕಾರು ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಆರೋಪಿಯು ಹೊತ್ತಿ ಉರಿಯುತ್ತಿದ್ದ ಗಾಡಿಯನ್ನು ರಸ್ತೆಯಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಧಾವಿಸಿರುವ ಪೊಲೀಸರು ನಾಲ್ಕೂ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತವಾದ ಸ್ಥಳದಲ್ಲೂ ಪರಿಶೀಲನೆ ನಡೆಸಲಾಗಿದೆ. ಕೊಲೆ ಮಾಡಿ ಪರಾರಿಯಾಗಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net