More

    ಮಕ್ಕಳೆದುರು ಬೆತ್ತಲಾಗಿದ್ದ ರೆಹನಾ ಪೊಲೀಸರೆದುರು ಶರಣು: ಕೊನೆಗೂ ಅಂದ್ಕೊಂಡಿದ್ದು ಆಗಲೇ ಇಲ್ಲ!

    ಕೊಚ್ಚಿ: ಅರೆನಗ್ನ ದೇಹದ ಮೇಲೆ ತನ್ನ ಮಕ್ಕಳ ಕೈಯಿಂದಲೇ ಡ್ರಾಯಿಂಗ್​ ಮಾಡಿಸಿಕೊಂಡು ವಿಡಿಯೋ ಹರಿಬಿಟ್ಟು ವಿವಾದ ಸೃಷ್ಟಿಸಿದ್ದ ಕೇರಳ ಆ್ಯಕ್ಟಿವಿಸ್ಟ್​ ರೆಹನಾ ಫಾತಿಮಾ ಕೊನೆಗೂ ಪೊಲೀಸರ ಮುಂದೆ ಶರಣಾಗಿದ್ದಾರೆ.

    ನಿರೀಕ್ಷಿಣಾ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್​ ನಡೆ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿಯು ಸಹ ವಜಾಗೊಂಡ ದಿನದ ಬೆನ್ನಲ್ಲೇ ಶನಿವಾರ ಸಂಜೆ ಪೊಲೀಸರ ಮುಂದೆ ರೆಹನಾ ಸರೆಂಡರ್​ ಆಗಿದ್ದಾರೆ. ಅಂದಹಾಗೆ ರೆಹನಾ ವಿರುದ್ಧ ಪೊಕ್ಸೊ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ರೆಹನಾ ಜೂನ್​ 19ರಂದು ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಬಾಡಿ ಆರ್ಟ್ಸ್​ ಪಾಲಿಟಿಕ್ಸ್​ (#BodyArtPolitics) ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದರು. ವಿಡಿಯೋದಲ್ಲಿ ರೆಹನಾ ತನ್ನ ಮಗ ಹಾಗೂ ಮಗಳ ಕೈಯಿಂದ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ದೃಶ್ಯವಿದೆ. ವಿಡಿಯೋ ಮಾಡಿದ್ದರ ಉದ್ದೇಶದ ಬಗ್ಗೆ ತಿಳಿಸಿದ್ದ ರೆಹನಾ, ಲೈಂಗಿಕತೆ ಮತ್ತು ನಗ್ನತೆ ನಿಷೇಧವಾಗಿರುವ ಸಮಾಜದಲ್ಲಿ ಮಹಿಳೆಯರು ಲೈಂಗಿಕತೆ ಮತ್ತು ಅವರ ದೇಹದ ಬಗ್ಗೆ ಮುಕ್ತವಾಗಿರಬೇಕು ಎಂದು ಪುನರುಚ್ಚರಿಸುವುದಕ್ಕಾಗಿ ಈ ವಿಡಿಯೋವನ್ನು ಮಾಡಿದ್ದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ದೂರು ದಾಖಲಾಗಿತ್ತು. ಅಲ್ಲದೆ, ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಆಯೋಗವು ಸಹ ಮಧ್ಯಪ್ರವೇಶಿಸಿತ್ತು.

    ಇದರ ಮಧ್ಯೆ ರೆಹನಾ ಹೈಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇರಳ ಸರ್ಕಾರ ರೆಹನಾ ವಿರುದ್ಧ ಅರ್ಜಿ ಸಲ್ಲಿಸಿತ್ತು. ರೆಹನಾ ತಮ್ಮ ಅರೆನಗ್ನ ದೇಹದ ಮೇಲೆ ಚಿತ್ರಿಸಲು ಮಕ್ಕಳನ್ನು ಬಳಸಿಕೊಂಡಿದ್ದಾರೆ. ಇದು ಪೊಕ್ಸೊ ಕಾಯ್ದೆಯ ಉಲ್ಲಂಘನೆಯಾಗಿದೆ. ಹೀಗಾಗಿ ರೆಹನಾ ವಿಚಾರಣೆಯ ಅಗತ್ಯವಿದೆ ಎಂದು ಸರ್ಕಾರ ಹೇಳಿತ್ತು. ಸರ್ಕಾರದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್​, ನಿಮ್ಮ ತತ್ವಶಾಸ್ತ್ರದ ಪ್ರಕಾರ ನಿಮ್ಮ ಮಕ್ಕಳಿಗೆ ಕಲಿಸುವ ಸ್ವತಂತ್ರ ನಿಮಗಿದೆ. ಆದರೆ, ಅದು ನಿಮ್ಮ ಮನೆಯ ನಾಲ್ಕು ಗೋಡೆಗಳ ನಡುವೆ ಇರಬೇಕು ಮತ್ತು ಕಾನೂನನ್ನು ಉಲ್ಲಂಘಿಸುವಂತಿರಬಾರದು ಎಂದು ರೆಹನಾಗೆ ಬುದ್ಧಿ ಹೇಳಿದ್ದರು. ಇದೇ ವೇಳೆ ಮಕ್ಕಳ ಜೀವನದಲ್ಲಿ ತಾಯಿ ಪಾತ್ರದ ಬಗ್ಗೆ ತಿಳಿಸಿದ ಜಡ್ಜ್​ ಮುಂದಿನ ತನಿಖೆಗೆ ಪೊಲೀಸರಿಗೆ ಸಹಕರಿಸುವಂತೆ ಸೂಚನೆ ನೀಡಿದ್ದರು.

    ಇದರ ಬೆನ್ನಲ್ಲೇ ರೆಹನಾ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಆದರೆ, ಅಲ್ಲಿಯು ಅರ್ಜಿ ವಜಾ ಆಗಿ ನಿರೀಕ್ಷಣಾ ಜಾಮೀನು ದೊರೆಯದ ಕಾರಣ ಪೊಲೀಸರ ಮುಂದೆ ಶರಣಾಗಿದ್ದಾರೆ. ವಿಚಾರಣೆಗೆ ಹಾಗೂ ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಸಾಮಾಜಿಕ ಬದಲಾವಣೆಗೆ ಹಾಗೂ ಲಿಂಗ ಸಮಾನತೆಗೆ ಎಲ್ಲರೂ ನನಗೆ ಸಹಕಾರ ನೀಡುತ್ತೀರಿ ಎಂದು ಭಾವಿಸಿದ್ದೇನೆ. ನಾನು ಸರಿ ಎಂಬುದನ್ನು ಕಾಲವೇ ಸಾಬೀತುಪಡಿಸಲಿದೆ ಎಂದು ಶನಿವಾರ ರೆಹನಾ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು.

    ಅಂದಹಾಗೆ ರೆಹನಾ ಅವರು ಬಿಎಸ್​ಎನ್​ಎಲ್​ ಮಾಜಿ ಉದ್ಯೋಗಿಯಾಗಿದ್ದಾರೆ. ಅಯ್ಯಪ್ಪ ಭಕ್ತರ ನಂಬಿಕೆಗೆ ನೋವುಂಟು ಮಾಡುವ ಫೇಸ್​ಬುಕ್​ ಪೋಸ್ಟ್​ ಹಾಕಿದ ಆರೋಪದಲ್ಲಿ ಈ ಹಿಂದೆ ಬಂಧಿತರಾಗಿ 18 ದಿನ ಜೈಲುವಾಸ ಅನುಭವಿಸಿದ್ದರು. ಅಲ್ಲದೆ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ 2018ರ ಅಕ್ಟೋಬರ್​ನಲ್ಲಿ ರೆಹನಾ ಸಹ ಶಬರಿಮಲೆಗೆ ಭೇಟಿ ನೀಡುವ ಪ್ರಯತ್ನ ಮಾಡಿ, ಬಂಧಿತರಾಗಿ ಬಿಡುಗಡೆಯಾಗಿದ್ದರು. (ಏಜೆನ್ಸೀಸ್​)

    ನಾಲ್ಕು ಗೋಡೆಗಳ ನಡುವೆ ಇರಲಿ: ಮಕ್ಕಳ ಮುಂದೆ ಅರೆಬೆತ್ತಲೆಯಾದ ರೆಹಾನಾಗೆ ಹೈಕೋರ್ಟ್​ ಶಾಕ್! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts