More

    ದಂತ ಬಾಧೆ ತಡೆಗೆ ಮುಂಜಾಗ್ರತೆ ಅಗತ್ಯ

    ಬಾಳೆಹೊನ್ನೂರು: ನಿರಂತರವಾಗಿ ದಂತಗಳನ್ನು ತಪಾಸಣೆ ಮಾಡಿಸಿಕೊಂಡರೆ ಅವುಗಳಿಗೆ ಬರುವ ರೋಗಗಳನ್ನು ಮುಂಚೆಯೇ ತಡೆಗಟ್ಟಲು ಸಾಧ್ಯ ಎಂದು ಮಕ್ಕಳ ದಂತ ತಜ್ಞೆ ಡಾ. ರತ್ನಶ್ರೀ ಹೇಳಿದರು.

    ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಮಂಗಳವಾರ ಆಯೋಜಿಸಿದ್ದ ದಂತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
    ಮಕ್ಕಳು ಕಿರಿಯ ವಯಸ್ಸಿನಿಂದಲೇ ದಂತ ರಕ್ಷಣೆ ಕುರಿತು ಕಾಳಜಿ ವಹಿಸಬೇಕು. ಇದರಿಂದ ದಂತಗಳು ಸುದೀರ್ಘವಾಗಿ ಬಾಳಿಕೆ ಬರುತ್ತವೆ. ಇನ್ನರ್‌ವ್ಹೀಲ್ ಸಂಸ್ಥೆ ಉತ್ತಮ ಕಾರ್ಯವನ್ನು ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
    ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮೇನಕಾ ಜಯಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯದ ಕುರಿತು ಕಾಳಜಿ ಹೊಂದಿರುವ ಕ್ಲಬ್ ನಮ್ಮದು. ಸರ್ಕಾರಿ ಶಾಲೆಗಳಲ್ಲಿ ನಿರಂತರವಾಗಿ ಕಾರ್ಯಕ್ರಮ ಮಾಡುತ್ತಿದೆ. ದಂತ ತಪಾಸಣೆ ನಡೆಸಿ ಸಮಸ್ಯೆ ಇದ್ದವರಿಗೆ ಪರಿಹಾರೋಪಾಯವನ್ನೂ ತಿಳಿಸಿದೆ. 200 ವಿದ್ಯಾರ್ಥಿಗಳಿಗೆ ಟೂಥ್ ಪೇಸ್ಟ್, ಬ್ರಶ್, ದಿನಪಯೋಗಿ ಚಾರ್ಟ್‌ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
    ಕ್ಲಬ್ ಕಾರ್ಯದರ್ಶಿ ಕಾಂಚನಾ, ಸದಸ್ಯರಾದ ತಾಹಿರಾ, ಚೈತ್ರಾ, ಮುಖ್ಯಶಿಕ್ಷಕ ಸೋಮಶೇಖರ್ ಇತರರಿದ್ದರು.
    18ಕ್ಕೆ ನೇತ್ರ ತಪಾಸಣೆ: ಇನ್ನರ್‌ವ್ಹೀಲ್ ಕ್ಲಬ್‌ನಿಂದ ೆ.18ರಂದು ರೋಟರಿ ಭವನದಲ್ಲಿ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಮೇನಕಾ ಜಯಪ್ರಕಾಶ್ ತಿಳಿಸಿದ್ದಾರೆ. ನೇತ್ರ ತಜ್ಞೆ ಕೆ.ಎಂ.ರಶ್ಮಿ ಮೋಹನ್ ತಪಾಸಣೆ ನಡೆಸುವರು. ಅವಶ್ಯ ಇದ್ದವರಿಗೆ ಚಿಕ್ಕಮಗಳೂರಿನ ಜೀವನ್ ಸಂಧ್ಯಾ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ ಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts