ಮರ್ಮಾಂಗ ಕತ್ತರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ! ರಾಯಚೂರಲ್ಲಿ ಭಯಾನಕ ಘಟನೆ

New Project(13)
Published on

ರಾಯಚೂರು: ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನ ತಾನೇ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಇರಕಲ್ ಗ್ರಾಮದಲ್ಲಿ ನಡೆದಿದೆ.

ಗ್ವಾನಪ್ಪ (52)‌ ಮೃತ ದುರ್ದೈವಿ. ಈತನಿಗೆ ಹಲವು ದಿನಗಳಿಂದ ಕಾಲು ನೋವು ಅತೀವವಾಗಿ ಕಾಡುತ್ತಿತ್ತು. ಸೂಕ್ತ ಚಿಕಿತ್ಸೆ ಇಲ್ಲದೇ ನರಳುತ್ತಿದ್ದ.

ಕಾಲುನೋವು ತಾಳಲಾರದೆ ಬುಧವಾರ ಮರ್ಮಾಂಗ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net