ಭೀಕರ ಅಪಘಾತ: ಗರ್ಭಿಣಿ ಪುತ್ರಿ ಜತೆ ಎಎಸ್​ಐ ಸಾವು

New Project(8)
Published on

ಉಡುಪಿ: ಸ್ಕೂಟರ್​ ಮತ್ತು ಕೇರಳ ಕೆಎಸ್​ಆರ್​ಟಿಸಿ ಬಸ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗರ್ಭಿಣಿ ಪುತ್ರಿ ಜತೆ ಎಎಸ್​ಐ ಸಾವು ಮೃತಪಟ್ಟ ಘಟನೆ ಸಂತೆಕಟ್ಟೆ ಜಂಕ್ಷನ್​ನಲ್ಲಿ ಸಂಭವಿಸಿದೆ.

ಗರಡಿಮಜಲು ನಿವಾಸಿ ಕರಾವಳಿ ಕಾವಲು ಪಡೆಯ ಎಎಸ್​ಐ ಗಣೇಶ್​ ಪೈ (58) ಹಾಗೂ ಇವರ ಹಿರಿಯ ಮಗಳು ಗಾಯತ್ರಿ (27) ಮೃತರು. ಗಾಯತ್ರಿಗೆ ಮೂರು ವರ್ಷದ ಹಿಂದೆ ವಿವಾಹವಾಗಿದ್ದು, ಗಂಡ ಬ್ಯಾಂಕ್​ ಉದ್ಯೋಗಿಯಾಗಿದ್ದಾರೆ. ಸದ್ಯ ಮೂರು ತಿಂಗಳ ಗರ್ಭಿಣಿಯಾಗಿದ್ದ ಅವರು ತವರು ಮನೆಯಲ್ಲಿ ಮಾ.4ರಂದು ನಿಗದಿಯಾಗಿದ್ದ ಸಮಾರಂಭಕ್ಕೆ 2 ದಿನ ಮುಂಚಿತವಾಗಿ ಆಗಮಿಸುತ್ತಿದ್ದರು.

ಬುಧವಾರ ಬೆಳಗ್ಗೆ 5.30ಕ್ಕೆ ಗದಗದಿಂದ ಆಗಮಿಸಿದ್ದ ತಮ್ಮ ಮಗಳನ್ನು ಬಸ್​ ತಂಗುದಾಣದಿಂದ ಮನೆಗೆ ಕರೆದುಕೊಂಡು ಸ್ಕೂಟರ್​ನಲ್ಲಿ ತಂದೆ ಹೋಗುತ್ತಿದ್ದರು. ಈ ವೇಳೆ ಕೇರಳದಿಂದ ಕೊಲ್ಲೂರಿಗೆ ಹೋಗುತ್ತಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್​ ಸ್ಕೂಟರ್​ಗೆ ಡಿಕ್ಕಿ ಹೊಡಿದ್ದಿದ್ದು, ತಂದೆ-ಮಗಳು ದುರ್ಮರಣ ಹೊಂದಿದ್ದಾರೆ.

ಘಟನೆಗೆ ಬಸ್​ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ತೀರಾ ಎಡಬದಿಗೆ ಚಲಿಸಿದ ಬಸ್​ ಗಣೇಶ್​ ಪೈ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ತಂದೆ ಮತ್ತು ಮಗಳು ರಸ್ತೆ ಮೇಲೆ ಬಿದ್ದು, ಇಬ್ಬರ ತಲೆಗೂ ಗಂಭೀರ ಗಾಯವಾಗಿತ್ತು. ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಣೇಶ್​ ಪೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net