ಶಿವಣ್ಣನನ್ನ ತಬ್ಬಿಕೊಂಡು Jr.NTR ಕಣ್ಣೀರು! ನಾನು ಕರೆದಾಗಲೆಲ್ಲ ಪುನೀತ್​ ಬರ್ತಿದ್ರು...

New Project (12)
Published on

ಬೆಂಗಳೂರು: ಚಂದನವನದ 'ರಾಜಕುಮಾರ' ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆದ ಜೂ. ಎನ್​ಟಿಆರ್​ ಅವರು ಶಿವರಾಜ್​ಕುಮಾರ್​ ಅವನ್ನ ತಬ್ಬಿಕೊಂಡು ಸಂತಾಪ ಸೂಚಿಸಿದರು.

ತಮ್ಮನಂತಿದ್ದ ಪುನೀತ್​ ರಾಜ್​ಕುಮಾರ್​ ಅವರ ಅಗಲಿಕೆ ತೀವ್ರ ದುಃಖ ತಂದಿದೆ ಎಂದು ನಂದಮೂರಿ ಬಾಲಕೃಷ್ಣ ಭಾವುಕರಾದರು. ನಮ್ಮ ತಂದೆಯ ಕಾಲದಿಂದಲೂ ರಾಜ್​ಕುಮಾರ್​ ಕುಟುಂಬದೊಂದಿಗೆ ಉತ್ತಮ ಸಂಬಂಧವಿದೆ. ಪ್ರತಿವರ್ಷ ಲೇಪಾಕ್ಷಿ ಉತ್ಸವ ನಡೆದಾಗಲೆಲ್ಲ ಅಪ್ಪುವನ್ನು ಕರೆಯುತ್ತಿದ್ದೆ. ಅವರು ಖುಷಿಯಿಂದಲೇ ಬರುತ್ತಿದ್ದರು. ಪುನೀತ್​ ಇನ್ನಿಲ್ಲ ಎಂಬ ಕಹಿ ಸತ್ಯವನ್ನ ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವರು ಇಷ್ಟು ಬೇಗ ಅವರನ್ನು ಕರೆಸಿಕೊಂಡದ್ದು ನಿಜಕ್ಕೂ ನಂಬಲು ಆಗುತ್ತಿಲ್ಲ. ಪುನೀತ್​ ಅಗಲಿಕೆ ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದು ಕಣ್ಣೀರಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net