More

    ಗೆಳೆಯ ಪುನೀತ್​ರ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಬಂದ ನಟಿ ರಮ್ಯಾ

    ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರ ಸಾವಿನ ಸುದ್ದಿ ಕೇಳಿ ತೀವ್ರ ಸಂತಾಪ ಸೂಚಿಸಿರುವ ನಟಿ ರಮ್ಯಾ, ಗೆಳೆಯ ಅಪ್ಪು ಅವರ ಅಂತಿಮ ದರ್ಶನ ಪಡೆಯಲು ವಿದೇಶದಿಂದ ನಟಿ ರಮ್ಯಾ ಬೆಂಗಳೂರಿಗೆ ಆಗಮಿಸಿದ್ದಾರೆ.

    ಶನಿವಾರ ಮಧ್ಯಾಹ್ನ ಕೆಂಪೇಗೌಡ ಅಂತಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಮ್ಯಾ, ಕಂಠೀರವ ಸ್ಟೇಡಿಯಂನತ್ತ ಪ್ರಯಾಣ ಬೆಳೆಸಿದರು. ಇದೇ ವೇಳೆ ಮಾತನಾಡಿದ ರಮ್ಯಾ, ನನ್ನ ಬದುಕಿನಲ್ಲಿ ಉತ್ತಮ ಗೆಳೆಯರೊಬ್ಬರನ್ನ ಕಳೆದುಕೊಂಡಿರುವೆ. ಅಪ್ಪು ನೀವು ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದೀರಿ ಎಂಬುದನ್ನ ನಂಬಲಾಗ್ತಿಲ್ಲ ಎಂದು ಭಾವುಕರಾದರು.

    ನಾಯಕ ನಟರಾಗಿ ಪುನೀತ್​ ಅಭಿನಯಿಸಿದ್ದ ಎರಡನೇ ಮೂವಿ ‘ಅಭಿ’. ಈ ಸಿನಿಮಾದಲ್ಲಿ ಅಪ್ಪುಗೆ ನಾಯಕಿಯಾಗಿದ್ದ ರಮ್ಯಾ. ಆ ನಂತರ ಆಕಾಶ್​, ಅರಸು ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿದ್ದರು.

    ಇದೆಂಥಾ ದುರ್ವಿಧಿ: ಅಪ್ಪು ವ್ಯಕ್ತಿತ್ವ ಸಾರುವ ಈ ಹಾಡಿನ ಸಾಲು ಅವರ ಅಕಾಲಿಕ ಮರಣವನ್ನೂ ನಿಜವಾಗಿಸಿ ಬಿಡ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts