ರಾಜ್ಯಾದ್ಯಂತ 'ಪುನೀತ್ ಫುಡ್ ಫೆಸ್ಟಿವಲ್'! ಅಪ್ಪು ಇಷ್ಟಪಡುತ್ತಿದ್ದ ಎಲ್ಲ ರೀತಿಯ ಆಹಾರ ಸವಿಯಲು ಫ್ಯಾನ್ಸ್​ಗೆ ಅವಕಾಶ

puneeth rajkumar
Published on

ಬೆಂಗಳೂರು: ಕರ್ನಾಟಕ ರತ್ನ ಡಾ.ಪುನೀತ್​ ರಾಜ್​ಕುಮಾರ್​ ಅಭಿನಯದ 'ಗಂಧದ ಗುಡಿ' ಪ್ರಿರಿಲೀಸ್ ಇವೆಂಟ್​ಗೆ ದಿನಗಣನೆ ಆರಂಭವಾಗಿದೆ. ಅ.21ರಂದು ಅದ್ದೂರಿಯಾಗಿ ನಡೆಯಲಿರುವ ಪ್ರಿರಿಲೀಸ್ ಇವೆಂಟ್​ನಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಸಮಾಗಮ ಆಗಲಿದೆ. ಇದೇ ವೇಳೆ ಕರ್ನಾಟಕದಾದ್ಯಂತ 'ಪುನೀತ್ ಫುಡ್ ಫೆಸ್ಟಿವಲ್' ಕೂಡ ನಡೆಯಲಿದೆ!

ಅ.22 ಮತ್ತು 23ರಂದು 'ಫ್ಲೇವರ್ಸ್ ಆಫ್ ಗಂಧದ ಗುಡಿ' ಟೈಟಲ್​​ನಲ್ಲಿ ಫುಡ್​ ಫೆಸ್ಟಿವಲ್ ನಡೆಯಲಿದೆ. ಅಪ್ಪು ಅವರು ಈ ಹಿಂದೆ ಭೇಟಿ ಕೊಟ್ಟಿದ್ದ ಎಲ್ಲ ಹೋಟೆಲ್​ಗಳಲ್ಲೂ ಫುಡ್ ​ಫೆಸ್ಟಿವಲ್ ನಡೆಯುತ್ತಿದ್ದು, ಅಪ್ಪು ಇಷ್ಟಪಡುತ್ತಿದ್ದ ಎಲ್ಲ ರೀತಿಯ ಆಹಾರ ಸವಿಯಲು ಜನರಿಗೆ ಅವಕಾಶವಿದೆ. ವೆಜ್ ಜತೆಗೆ ನಾನ್​ವೆಜ್​ ಊಟದ ವ್ಯವಸ್ಥೆಯೂ ಇರಲಿದೆ. ಅಪ್ಪುಗಾಗಿ ಹೋಟೆಲ್​​​​​ ಮಾಲೀಕರು ಫುಡ್​ ಫೆಸ್ಟಿವಲ್ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.

ಕರ್ನಾಟಕದಾದ್ಯಂತ 'ಫುಡ್ ಫೆಸ್ಟಿವಲ್' ಮಾಡುವ ಕನಸನ್ನು ಅಪ್ಪು ಕಂಡಿದ್ದರಂತೆ. ಅವರ ಕನಸನ್ನು ಈಗ ನನಸು ಮಾಡಲಾಗುತ್ತಿದೆ. ಆ್ಯಂಕರ್ ಅನುಶ್ರೀ, ನಟ ಧನಂಜಯ್ ಸೇರಿದಂತೆ ಹಲವು ನಟರು ಅಪ್ಪು ಭೇಟಿ ಮಾಡಿ ಭೋಜನ ಸವಿದಿದ್ದ ಹೋಟೆಲ್​ಗಳಿಗೆ ಭೇಟಿ ನೀಡಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net