ಬಸ್​ನಲ್ಲಿ ಚಿನ್ನ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆ: ಮಾನವೀಯತೆ ಮೆರೆದ ಮಧುಗಿರಿ ಡಿಪೋ ಕಂಡಕ್ಟರ್ ಶ್ರೀಧರ್​

Madhugiri KSRTC Depot bus conductor sridhar
Published on

ತುಮಕೂರು: ರಸ್ತೆಯಲ್ಲಿ ಒಂದು ರೂಪಾಯಿ ಕಂಡರೂ ತಕ್ಷಣ ಎತ್ತಿ ಜೇಬಿಗಿಟ್ಟುಕೊಳ್ಳವವರೇ ಹೆಚ್ಚು, ಇನ್ನು ಚಿನ್ನಾಭರಣ ಸಿಕ್ಕರೆ ಬಿಡ್ತಾರಾ? ಚಿನ್ನ ಅಥವಾ ಹಣ ಕಳೆದುಕೊಂಡವರು ಪಕ್ಕದಲ್ಲಿ ಗೋಳಾಡುತ್ತಿದ್ದರೂ ತಮಗೇನೂ ಗೊತ್ತಿಲ್ಲ ಎಂಬಂತೆ ಕ್ಷಣಾರ್ಧದಲ್ಲೇ ಮಾಯವಾಗಿ ಬಿಡ್ತಾರೆ. ಅಂತಹ ಕಾಲದಲ್ಲಿ ಇಲ್ಲೊಬ್ಬ ಕಂಡಕ್ಟರ್​ ಮಾದರಿಯಾಗಿ ನಿಲ್ಲುತ್ತಾರೆ. ಬಸ್​ನಲ್ಲಿ ಸಿಕ್ಕ ಚಿನ್ನದ ಆಭರಣವನ್ನು ಸಂಬಂಧಪಟ್ಟವರಿಗೆ ಖುದ್ದು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಮಾನವೀಯತೆ ಮೆರೆದ ಕಂಡಕ್ಟರ್​ ಹೆಸರು ಶ್ರೀಧರ್​. ಮಧುಗಿರಿ ಕೆಎಸ್​ರ್​ಟಿಸಿ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಧುಗಿರಿಯಿಂದ ಬೆಂಗಳೂರಿಗೆ ಹೋಗುವಾಗ ಬಸ್​ನಲ್ಲಿಯೇ ಪ್ರಯಾಣಿಕರೊಬ್ಬರು ಬ್ಯಾಗ್​ವೊಂದನ್ನು ಮರೆತು ಹೋಗಿದ್ದರು. ಅದರಲ್ಲಿ ಒಂದು ಜೊತೆ ಚಿನ್ನದ ಕಿವಿಯೋಲೆ, ಬೆಳ್ಳಿ ಕಾಲ್ಗೆಜ್ಜೆ ಇತ್ತು. ಇದನ್ನು ಕಳೆದುಕೊಂಡವರು ಅದೆಷ್ಟು ಗೋಳಾಡುತ್ತಿದ್ದಾರೋ ಎಂದು ಮರುಗಿದ ಕಂಡಕ್ಟರ್​, ಕೂಡಲೇ ಅದನ್ನು ಸಂಬಂಧಪಟ್ಟವರಿಗೆ ತಲುಪಿಸಲು ಯತ್ನಿಸುತ್ತಿದ್ದರು.

ಈ ಬ್ಯಾಗ್​ ಇರಕಸಂದ್ರ ಕಾಲನಿಯ ಲಲಿತ ಎಂಬುವರಿಗೆ ಸೇರಿದ್ದಾಗಿದೆ. ಬೆಂಗಳೂರಿನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗ್ ಅನ್ನು ಲಲಿತಾಗೆ ಶ್ರೀಧರ್ ಹಸ್ತಾಂತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net