ಖಾಸಗಿ ಟಿವಿ ವಾಹಿನಿಯ ಕ್ಯಾಮರಾಮನ್ ಕರೊನಾಗೆ ಬಲಿ

basavaraj koti
Published on

ಚಿತ್ರದುರ್ಗ: ಮಹಾಮಾರಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಅಪಾರ ಪ್ರಮಾಣದ ಸಾವು-ನೋವನ್ನು ತಂದೊಡ್ಡುತ್ತಿದೆ. ಇದೀಗ ಖಾಸಗಿ ಟಿವಿ ವಾಹಿನಿಯೊಂದರ ಕ್ಯಾಮರಾಮನ್ ಅವರನ್ನೂ ಬಲಿ ಪಡೆದಿದೆ.

ಬಸವರಾಜ್ ಕೋಟಿ ಮೃತರು. ಪಬ್ಲಿಕ್ ಟಿವಿ ಚಾನೆಲ್​ನ ಕ್ಯಾಮರಾಮನ್ ಆಗಿದ್ದ ಇವರು ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ 10 ದಿನಗಳ ಹಿಂದೆ ಕರೊನಾ ಸೋಂಕು ತಗುಲಿತ್ತು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಇಂದು(ಬುಧವಾರ) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net