VIDEO| ಕಾರಿನ ಮುಂದೆ 'ಕೋವಿಡ್ ಡ್ಯೂಟಿ' ಬೋರ್ಡ್​, ಒಳಗೆ ಇದ್ದದ್ದು ಮಾತ್ರ ಅರ್ಚಕರು!

corona rules break
Published on

ವಿಜಯಪುರ: ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿಯಾಗಿದ್ದು, ​ಪೊಲೀಸರು ಎಲ್ಲೆಡೆ ನಾಕಾ ಬಂದಿ ಹಾಕಿ ಕಾವಲು ಕಾಯುತ್ತಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಓಡಾಡಲು ಕೆಲವರು ಕರೊನಾ ವಾರಿಯರ್ಸ್​ ಸೋಗಿನಲ್ಲಿ ಸಂಚರಿಸುತ್ತಿದ್ದು, ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದಾರೆ. ಇಂತಹದ್ದೇ ಮತ್ತೊಂದು ವಿಜಯಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಅರ್ಜೆಂಟ್ ಕೋವಿಡ್-19 ಆನ್​ ಡ್ಯೂಟಿ' ಎಂದು ಕಾರಿಗೆ ಬೋರ್ಡ್ ಹಾಕಿಕೊಂಡು ಅರ್ಚಕರನ್ನು ಕರೆದೊಯ್ಯುತ್ತಿದ್ದ ಕಾರನ್ನ ನಡುರಸ್ತೆಯಲ್ಲೇ ನಿಲ್ಲಿಸಿದ ಪೊಲೀಸರು ಸೀಜ್‌ ಮಾಡಿದ್ದಾರೆ.

ಆರಂಭದಲ್ಲಿ ಕೋವಿಡ್ ಡ್ಯೂಟಿಗೆ ಸಂಬಂಧಿಸಿದ ವಾಹನ ಇರಬೇಕು ಎಂದುಕೊಂಡ ಪೊಲೀಸರಿಗೆ ಆ ಕಾರಿನಲ್ಲಿ ಅರ್ಚಕರು ಕಣ್ಣಿಗೆ ಬಿದ್ದರು. ಕೂಡಲೇ ಕಾರನ್ನು ಪೊಲೀಸರು ಅಡ್ಡಗಟ್ಟಿದ್ದು, ಮುಂಬದಿ ಮತ್ತು ಹಿಂಬದಿ ಸೀಟಿನಲ್ಲಿ ಇಬ್ಬರು ಅರ್ಚಕರು ಕುಳಿತಿದ್ದರು. ಕಾರು ತಡೆದು ವಿಚಾರಣೆ ನಡೆಸಿದಾಗ ಕೋವಿಡ್ ಡ್ಯೂಟಿ ಹೆಸರು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕಾರಿನಿಂದ ಅರ್ಚಕರನ್ನು ಕೆಳಗಿಳಿಸಿ ಕಾರನ್ನು ಸೀಜ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net