ಕುಡಿವ ನೀರಿನ ಟ್ಯಾಂಕ್​ಗೆ ವಿಷದ ಬಾಟಲಿ ಎಸೆದ ಕಿಡಿಗೇಡಿಗಳು! ಭಾರಿ ದುರಂತ ತಪ್ಪಿದ್ದೇ ರೋಚಕ

visha
Published on

ವಿಜಯನಗರ: ಕುಡಿವ ನೀರಿನ ಟ್ಯಾಂಕ್​ಗೆ ಕಿಡಿಗೇಡಿಗಳು ಕ್ರಿಮಿನಾಶಕ ಗುಳಿಗೆಯುಳ್ಳ ಬಾಟಲಿ ಹಾಕಿ ವಿಕೃತಿ ಮೆರೆದಿದ್ದು, ಸ್ಥಳೀಯರು ಆತಂಕಗೊಂಡ ಘಟನೆ ಹರಪನಹಳ್ಳಿ‌ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

ಚಿಗಟೇರಿ ಗ್ರಾಮದ ಶಿವನಯ್ಯನ ಕೆರೆಗೆ ಹೋಗುವ ಮಾರ್ಗದಲ್ಲಿರುವ ನೀರು ತುಂಬಿದ ಸಂಪಿಗೆ (ನೆಲ ಮಹಡಿ ಟ್ಯಾಂಕ್) ಮೆಕ್ಕೆಜೋಳಕ್ಕೆ ಹೊಡೆಯುವ‌‌ ಕ್ರಿಮಿನಾಶಕ ಗುಳಿಗೆಗಳುಳ್ಳ ಬಾಟಲಿಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಬಿಸಾಡಿದ್ದಾರೆ. ಇಂದು ಬೆಳಗ್ಗೆ ಗ್ರಾಮಕ್ಕೆ ನೀರು ಬಿಡುವಾಗ ವಾಸನೆ ಬಂದಿದ್ದು, ನೀರುಗಂಟಿ ಸಿದ್ದೇಶ ಅವರು ಸಂಪಿನ ಮುಚ್ಚಳ ತೆಗೆದು ನೋಡಿದಾಗ ಅದರಲ್ಲಿ ವಿಷದ ಬಾಟಲಿ ಇರುವುದು ಗೊತ್ತಾಗಿದೆ. ಇದನ್ನೂ ಓದಿರಿ ರಮೇಶ್ ಜಾರಕಿಹೊಳಿ ಅಪಾರ್ಟ್​ಮೆಂಟ್​ನಲ್ಲಿದೆ ಸೀಕ್ರೆಟ್​ ಡೋರ್​! ಸ್ಫೋಟಕ ರಹಸ್ಯ ಬಯಲು

ಕೂಡಲೇ ಗ್ರಾಮಸ್ಥರಿಗೆ ನೀರನ್ನು ಕುಡಿಯದಂತೆ ನೀರಗಂಟಿ ಹೇಳಿದ್ದು, ಗ್ರಾಮಸ್ಥರೆಲ್ಲರೂ ಸಂಗ್ರಹಿಸಿದ್ದ ನೀರನ್ನು ಹೊರ ಚೆಲ್ಲಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೀರುಗಂಟಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆ ತಾಪಂ ಇಒ ಈಶ್ವರ ಪ್ರಸಾದ್, ಡಿವೈಎಸ್​ಪಿ ಹಾಲಮೂರ್ತಿರಾವ್, ಕುಡಿಯುವ ನೀರು ನೈರ್ಮಲ್ಯ ಎಇಇ ಸಿದ್ದರಾಜು, ಜೆಇ ಗಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್​ ಅಧಿಕಾರಿಗಳಿಗೆ ಶಾಸಕ ಕರುಣಾಕರರೆಡ್ಡಿ ಸೂಚನೆ ನೀಡಿದ್ದಾರೆ. ಆರೋಪಿಗಳನ್ನ ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಚಿಗಟೇರಿ ಪೊಲೀಸ್ ಠಾಣೆಗೆ ಪಿಡಿಒ ಫಕ್ಕೀರಪ್ಪ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net