ರಮೇಶ್ ಜಾರಕಿಹೊಳಿ ಅಪಾರ್ಟ್​ಮೆಂಟ್​ನಲ್ಲಿದೆ ಸೀಕ್ರೆಟ್​ ಡೋರ್​! ಸ್ಫೋಟಕ ರಹಸ್ಯ ಬಯಲು

cd case
Published on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್​ ಬೆನ್ನತ್ತಿದ್ದ ಪೊಲೀಸರಿಗೆ 'ಸೀಕ್ರೆಟ್​ ಡೋರ್​' ರಹಸ್ಯವನ್ನ 'ಸಂತ್ರಸ್ತ' ಯುವತಿಯೇ ತೋರಿಸಿದ್ದಾಳೆ!

ಮಲ್ಲೇಶ್ವರಂನ ಮಂತ್ರಿ ಗ್ರೀನ್ಸ್​ನಲ್ಲಿರುವ 1705 ನಂಬರಿನ ಅಪಾರ್ಟ್​ಮೆಂಟ್​ ರಮೇಶ್ ಜಾರಕಿಹೊಳಿಗೆ ಸೇರಿದ್ದು. ರಮೇಶ್ 2002ರಲ್ಲಿ ತನ್ನ ಪತ್ನಿ ಹೆಸರಿನಲ್ಲಿ ಇದನ್ನ ಖರೀದಿಸಿದ್ದರು. ಈ ಅಪಾರ್ಟ್​ಮೆಂಟ್​​ಗೆ ಸಿಡಿ ಲೇಡಿಯನ್ನ ಜಾರಕಿಹೊಳಿ 5 ಬಾರಿ ಕರೆಸಿಕೊಂಡಿದ್ದರಂತೆ. ತನ್ನ ಮೇಲೆ ಅತ್ಯಾಚಾರ ಆಗಿದ್ದು ಇದೇ ಅಪಾರ್ಟ್​ಮೆಂಟ್​ನಲ್ಲಿ ಎಂದು 'ಸಂತ್ರಸ್ತ' ಯುವತಿ ಹೇಳಿದ್ದಳು. ಪೊಲೀಸರು ಸ್ಥಳ ಮಹಜರು ಮಾಡಿದ್ದರು. ಇದನ್ನೂ ಓದಿರಿ ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

ಮಂತ್ರಿ ಗ್ರೀನ್ಸ್​ನಲ್ಲಿರುವ 1705 ನಂಬರಿನ ಅಪಾರ್ಟ್​ಮೆಂಟ್​ನಲ್ಲಿ ಸಿಕ್ರೇಟ್ ಡೋರ್ ಇದೆ. ಮೇನ್ ಡೋರ್​ನಲ್ಲಿ ನನ್ನನ್ನು ಒಳ ಕರೆಸಿಕೊಂಡು ಸೀಕ್ರೆಟ್​ ಡೋರ್​ನಿಂದ ಹೊರಕ್ಕೆ ಕಳುಹಿಸುತ್ತಿದ್ದರು ಎಂದು ಯುವತಿ ಹೇಳಿದ್ದಳು. ಆದರೆ ಪೊಲೀಸರು ನೋಡಿದರೆ ಆ ಡೋರ್ ಪತ್ತೆಯಾಗಿರಲಿಲ್ಲ. ಮಹಜರು ವೇಳೆ ಸ್ವತಃ ಯುವತಿಯೇ ಆ ಡೋರ್ ಅನ್ನು ಎಸ್ಐಟಿಗೆ ತೋರಿಸಿದ್ದಾಳೆ!

ರಮೇಶ್​ರ ಅಪಾರ್ಟ್​ಮೆಂಟ್​ಗೆ 5 ಬಾರಿ ಬಂದಿದ್ದಾಗಿ ಎಸ್ಐಟಿ ವಿಚಾರಣೆ ವೇಳೆ ಯುವತಿ ಹೇಳಿದ್ದಳು. ಆದರೆ ಇದಕ್ಕೆ ಸಾಕ್ಷ್ಯ ರೆಕಾರ್ಡ್ ಆಗಿದ್ದು 3 ಬಾರಿ ಮಾತ್ರ. ಈ ಸಂಬಂಧ ಕೆಲವೊಂದು ವಿಡಿಯೋ ಮೊಬೈಲ್​ನಲ್ಲೂ ಪತ್ತೆಯಾಗಿದೆ. ಯುವತಿಯನ್ನ ಪ್ರತಿ ಬಾರಿಯೂ ಸೀಕ್ರೆಟ್​ ಡೋರ್ ಮೂಲಕವೇ ರಮೇಶ್​ ಹೊರ ಕಳುಹಿಸುತ್ತಿದ್ದರಂತೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net