ಆಸ್ಪತ್ರೆ ಒಳಗೂ ಹೆಣಗಳ ರಾಶಿ, ಹೊರಗೂ ಹೆಣ... ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುತ್ತೆ ಚಾಮರಾಜನಗರದ ಘಟನೆ

chamarajanagara covid hospital
Published on

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಭಾನುವಾರ ತಡರಾತ್ರಿ 20ಕ್ಕೂ ಹೆಚ್ಚು ಜನ ಕರೊನಾ ಸೋಂಕಿತರು ಪ್ರಾಣಬಿಟ್ಟಿ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಆಕ್ಸಿಜನ್​ ಹಾಹಾಕಾರ ಭೀಕರತೆಗೆ ಚಾಮರಾಜಗರದಲ್ಲಿನ ಈ ಘಟನೆಯೇ ಸಾಕ್ಷಿ. ಆಕ್ಸಿಜನ್​ ಇಲ್ಲದೆ 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಒಳಗೆ ಹೆಣವಾಗಿದ್ದರೆ, ಆಸ್ಪತ್ರೆ ಹೊರಗೆ ಮತ್ತೊಬ್ಬನ ಶವ ಅನಾಥವಾಗಿ ಬಿದ್ದಿದ್ದ ದೃಶ್ಯ ಸೋಮವಾರ ಬೆಳಗ್ಗೆ ಕಂಡು ಬಂದಿದೆ.

ಆಸ್ಪತ್ರೆಯ ಶವಗಾರದ ಸಮೀಪ ಸುಮಾರು 40ರಿಂದ 50 ವರ್ಷ ವಯಸ್ಸಿನ ಪುರುಷನ ಶವ ಬಿದ್ದಿದೆ. ಈತನಿಗೆ ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ರಸ್ತೆಬದಿ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿರಿ ‘ಸುಮಕ್ಕಾ ಎಲ್ಲಿದ್ದೀಯಾಕ್ಕಾ?’ ಜಾಲತಾಣದಲ್ಲಿ ಪೋಸ್ಟರ್​ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಸ್ವಾಭಿಮಾನಿ ಸಂಸದೆ

ನಿನ್ನೆ ಒಂದೇ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಮಂದಿ ಸತ್ತ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವೈದ್ಯರೊಂದಿಗೆ ಸಭೆ ನಡೆಸಿದ್ದಾರೆ.

ಇತ್ತ ಮೃತರ ಅಂತ್ಯಸಂಸ್ಕಾರಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಂಬುಲೆನ್ಸ್​ ಕೊರತೆ ಕಾಡುತ್ತಿದೆ. ಸದ್ಯ 2 ಆಂಬುಲೆನ್ಸ್​ ಲಭ್ಯವಿದ್ದು, ಒಂದು ಶವ ಸಂಸ್ಕಾರಕ್ಕೆ ಒಂದು ಗಂಟೆ ಸಮಯ ಬೇಕು. ಇರೋ ಎರಡು ಆಂಬುಲೆನ್ಸ್​ನಲ್ಲಿಯೇ ಒಂದೊಂದೇ ಶವಗಳನ್ನ ಶವಾಗಾರಕ್ಕೆ ಸಾಗಿಸುತ್ತಿದ್ದಾರೆ.

ಇತ್ತ ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಯಲ್ಲಿ ಆವರಣದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕರೊನಾ ಸೋಂಕಿತರಿಗೆ ಸರಿಯಾಗಿ ಸಿಗುತ್ತಿಲ್ಲ ಆಕ್ಸಿಜನ್ ಸಿಗುತ್ತಿಲ್ಲ. ಹಾಗಾಗಿಯೇ ನಮ್ಮವರು ಬಲಿಯಾದರು ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net