More

    ‘ಸುಮಕ್ಕಾ ಎಲ್ಲಿದ್ದೀಯಾಕ್ಕಾ?’ ಜಾಲತಾಣದಲ್ಲಿ ಪೋಸ್ಟರ್​ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಸ್ವಾಭಿಮಾನಿ ಸಂಸದೆ

    ಮಂಡ್ಯ: ಕಾಣೆಯಾಗಿದ್ದಾರೆ ಸ್ವಾಭಿಮಾನಿ ಸಂಸದೆ, ಸುಮ್ಮಕ್ಕಾ ಎಲ್ಲಿದ್ದೀಯಕ್ಕಾ? ಕರೊನಾದಿಂದ ಮಂಡ್ಯ ಜನತೆ ಪರದಾಡುತ್ತಿದ್ದರೂ ಎರಡು ತಿಂಗಳಿಂದ ಮಂಡ್ಯಕ್ಕೆ ಸಂಸದೆ ಕಾಲಿಟ್ಟಿಲ್ಲ… ಎಂಬ ಪೋಸ್ಟಲ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಹೆಸರಲ್ಲಿ ಗೆದ್ದ ಸುಮಲತಾ, ಕೋವಿಟ್ ಸಮಯದಲ್ಲಿ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ ಎಂದು ಆಕ್ಷೇಪಿಸಿ ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಚುನಾವಣೆ ವೇಳೆ ಜಿಲ್ಲೆಯ ಜನರೊಂದಿಗೆ ಇರುವುದಾಗಿ, ಜನರ ಕಷ್ಟ-ಸುಖಕ್ಕೆ ಸ್ಪಂದಿಸುವುದಾಗಿ ಹೇಳಿದ್ದ ಸುಮಕ್ಕಾ, ಕ್ಷೇತ್ರಕ್ಕೆ ಎರಡು ತಿಂಗಳಿಂದ ಕಾಲಿಟ್ಟಿಲ್ಲ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಸುಮಲತಾ, 54 ದಿನಗಳ ಬಳಿಕ ಅಂದರೆ ಇಂದು(ಸೋಮವಾರ) ಮಧ್ಯಾಹ್ನ ಮಂಡ್ಯ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಲಿದ್ದಾರೆ.

    'ಸುಮಕ್ಕಾ ಎಲ್ಲಿದ್ದೀಯಾಕ್ಕಾ?' ಜಾಲತಾಣದಲ್ಲಿ ಪೋಸ್ಟರ್​ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಸ್ವಾಭಿಮಾನಿ ಸಂಸದೆಸುಮಲತಾ ಅಂಬರೀಶ್ ಅವರು ಇಂದು ಮಧ್ಯಾಹ್ನ 3ಕ್ಕೆ ಮಂಡ್ಯ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತು ವಿಡಿಯೋ ಸಂವಾದ ನಡೆಸಲಿದ್ದಾರೆ ಎಂದು ಸಂಸದರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

    ವಿಡಿಯೋ ಸಂವಾದ ನಡೆಸುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೆಲವರು, ‘ಧನ್ಯವಾದಗಳು ಸುಮಕ್ಕಾ, ಮಂಡ್ಯ ಜನರ ಪ್ರೀತಿ ನಿಮಗೆ ಸದಾ ಸಿಗುವಂತಾಗಲಿ, ನಿಮ್ಮ ಸೇವೆ ಜನರಿಗೆ ಸಿಗಲಿ. ಅಂಬರೀಶಣ್ಣ ಇದ್ದಾಗ ಮಂಡ್ಯ ಜನರೆಂದರೆ ವಿಶೇಷವಾಗಿ ಪ್ರಾಣವನ್ನಿಟ್ಟುಕೊಂಡಿದ್ದರು. ಅದೇ ರೀತಿಯಲ್ಲಿ ಒಬ್ಬ ರಾಜಕಾರಣಿಯಾಗಿ ನಿಷ್ಪಕ್ಷಪಾತವಾಗಿ ಅನುದಾನ ತಂದು ಜನರ ಸೇವೆ ಮಾಡಿದ್ದಾರೆ. ನಿಮ್ಮಲ್ಲಿ ಕೂಡ ಅದನ್ನೇ ಇಷ್ಟ ಪಡುತ್ತೇವೆ’ ಎಂದು ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಕರೊನಾ ಹಿನ್ನೆಲೆ ಕೂಲಿ ಸಿಗ್ತಿಲ್ಲ, ಸಾಲ ತೀರಿಸೋಕೆ 3 ತಿಂಗಳು ಟೈಂ ಕೊಡಿ…ಇಲ್ಲಾಂದ್ರೆ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ತೀವಿ…

    ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ

    ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts