ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ

corona death case
Published on

ಹುಬ್ಬಳ್ಳಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರುದಿನವೇ ಮದುಮಗ ಕರೊನಾಗೆ ಬಲಿಯಾದ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಶಶಿಕುಮಾರ ಪಟ್ಟಣಶೆಟ್ಟಿ(27) ಮೃತ ದುರ್ದೈವಿ. ನಿನ್ನೆ ಖುಷಿಯಿಂದಲೇ ಹಸೆಮಣೆ ಏರಿದ್ದ ಶಶಿಕುಮಾರ, ಇಂದು ಶವವಾದ ಸುದ್ದಿ ಕೇಳಿ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಕರೊನಾ ನೀನೆಷ್ಟು ಕ್ರೂರಿ… ಎಂದು ಗ್ರಾಮಸ್ಥರಾದಿಯಾಗಿ ವಧುವಿನ ಕುಟುಂಬಸ್ಥರೂ ಶಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net