ಕಾರಹುಣ್ಣಿಮೆ ಪೂಜೆ ವೇಳೆ 'NEXT CM ಶ್ರೀರಾಮುಲು' ಎಂದು ಜಪಿಸಿದ ಅಭಿಮಾನಿ!

sriramulu
Published on

ವಿಜಯನಗರ: ಮುಂದಿನ ಸಿಎಂ ಸಿದ್ದರಾಮಯ್ಯ, ಮುಂದಿನ ಸಿಎಂ ಡಿಕೆಶಿ, ಬಿ.ವೈ.ವಿಜಯೇಂದ್ರ ಅವರೇ ನೆಕ್ಸ್ಟ್​ ಸಿಎಂ... ಈ ಮಾತುಗಳು ಪದೇಪದೆ ಕೇಳಿಬರುತ್ತಲೇ ಇದೆ. ಆದರೀಗ ಶ್ರೀರಾಮುಲು ಹೆಸರು ಮುನ್ನಲೆಗೆ ಬಂದಿದೆ.

ಇಂದು ಕಾರಹುಣ್ಣಿಮೆ. ಗ್ರಾಮೀಣ ಭಾಗಗಳಲ್ಲಿ ಎತ್ತುಗಳಿಗೆ ಸಿಂಗರಿಸಿ ಪೂಜಿಸುತ್ತಾರೆ. ಆದರೆ ಇಲ್ಲೊಬ್ಬ ರೈತ ತನ್ನ ಎತ್ತಿಗೆ ಬಣ್ಣ ಬಳಿದು ಸಿಂಗಾರ ಮಾಡಿ ಅದರ ಮೈಮೇಲೆ 'NEXT CM ಶ್ರೀರಾಮುಲು' ಎಂದು ಬರೆದಿದ್ದಾರೆ.

ಹಗರಿಬೊಮ್ಮನ ಹಳ್ಳಿಯ ಪೂಜಾರಿ ಸಿದ್ದಪ್ಪ ಎಂಬಾತ ಶ್ರೀರಾಮುಲು ಅವರ ಕಟ್ಟಾ ಅಭಿಮಾನಿ. ಹಾಗಾಗಿ ಅವರು ಶ್ರೀರಾಮುಲು ಸಿಎಂ ಆಗಬೇಕು ಎಂದು ಹುಣ್ಣಿಮೆ ದಿನ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net