More

    ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ಇನ್ನಿಲ್ಲ

    ಮಂಡ್ಯ: ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ಅವರು ಮಂಗಳವಾರ ನಿಧನರಾದರು.

    6 ದಶಕಗಳಿಂದಲೂ‌ ಪಾಂಡವಪುರ ತಾಲೂಕಿನ ಮೇಲುಕೋಟೆ ಬೆಟ್ಟದ ಮೇಲಿನ ಯೋಗನರಸಿಂಹ ಸ್ವಾಮಿ ದೇಗುಲಕ್ಕೆ ರಾಮಸ್ವಾಮಿ ಅಯ್ಯಂಗಾರ್ ನೀರನ್ನು ಹೊತ್ತೊಯ್ಯುತ್ತಿದ್ದರು. ದೇವರ ಅಭಿಷೇಕ ಮತ್ತು ಪ್ರಸಾದ ತಯಾರಿಕೆಗೆ ಬೆಟ್ಟದ ಕೆಳಗಿನ ಕೊಳದಿಂದ ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಕೊಂಡು ಪ್ರತಿನಿತ್ಯ ಬೆಟ್ಟ ಹತ್ತುತ್ತಿದ್ದರು.

    ವಯಸ್ಸು 60 ದಾಟಿದ್ರು ನೀರು ತುಂಬಿದ್ದ ಪಾತ್ರೆ ಹೊತ್ತುಕೊಂಡು ನಿತ್ಯ ನಾಲ್ಕೈದು ಬಾರಿ ಕಡಿದಾದ ಬೆಟ್ಟವನ್ನು ಹತ್ತುತ್ತಿದ್ದರು. ಇವರ ಅಗಾಧ ಶಕ್ತಿ ಮತ್ತು ದೃಢಕಾಯ ಶರೀರ ಕಂಡು ಸ್ಥಳೀಯರು ಮತ್ತು ಭಕ್ತರು ‘ಮೇಲುಕೋಟೆ ಬಾಹುಬಲಿ’ ಎಂದೇ ಕರೆಯುತ್ತಿದ್ದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ರಾಮಸ್ವಾಮಿ ಅಯ್ಯಂಗಾರ್ ಇಂದು ಕೊನೆಯುಸಿರೆಳೆದರು.

    ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

    ಕಾಸ್ಟಿಂಗ್ ಕೌಚ್ ವಿರುದ್ಧ ಸಿಡಿದೆದ್ದ ಯುವರತ್ನ ಚಿತ್ರ ಖ್ಯಾತಿಯ ಎಂ.ಕೆ.ಮಠ! ಕಲಾವಿದೆಯನ್ನು ಮಂಚಕ್ಕೆ ಕರೆದವನಿಗೆ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts