ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೆಲವೇ ಗಂಟೆಯಲ್ಲಿ ನವಜಾತ ಶಿಶು ಅಪಹರಣ!

baby
Published on

ಹಾಸನ: ಅರಕಲಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶುವನ್ನ ದುಷ್ಕರ್ಮಿಗಳು ಭಾನುವಾರ ರಾತ್ರಿ ಅಪಹರಣ ಮಾಡಿದ್ದಾರೆ.

ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಮಹಿಳೆ ಮಗು ಕಳೆದುಕೊಂಡವರು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಭಾನುವಾರ ಸಂಜೆ 7 ಗಂಟೆಗೆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ಸಮಯದ ಬಳಿಕೆ ಹೆರಿಗೆ ಆಗಿತ್ತು. ಆ ವೇಳೆ ಮಗು ಅಪಹರಿಸಲು ಹೊಂಚು ಹಾಕಿದ್ದ ನಾಲ್ವರು ಕಿಡಿಗೇಡಿಗಳು ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ ವಾರ್ಡ್​ಗೆ ತೆರಳಿ ಹಸುಗೂಸನ್ನು ಹೊತ್ತೊಯ್ದಿದ್ದಾರೆ. ಮಗು ಅಪಹರಿಸಲು ಬಂದ ನಾಲ್ವರು ಕಳ್ಳರಲ್ಲಿ ಒಬ್ಬರು ನರ್ಸ್ ವೇಶಧಾರಿಯಾಗಿದ್ದ ಬಂದಿದ್ದರು.

ಆಸ್ಪತ್ರೆ ಹಿಂಭಾಗದ ಬಾಗಿಲಿನಿಂದ ಮಗು ಅಪಹರಿಸಿ ಪರಾರಿಯಾಗಿದ್ದಾರೆ. ಆಸ್ಪತ್ರೆ ಸಿಸಿ ಟಿವಿ ಕ್ಯಾಮರಾದಲ್ಲಿ ಕಳ್ಳರ ಮುಖಚಹರೆ ಸೆರೆಯಾಗಿದೆ. ಅರಕಲಗೂಡು ನಗರ ಪೊಲೀಸ್ ಠಾಣೆಗೆ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ದೂರು ನೀಡಿದ್ದು, ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net