

ತ್ರಿಶ್ಶೂರು: ಕೋವಿಡ್ ನಿಯಮಗಳ ಕಾರಣ ಮದುವೆ ಮತ್ತು ಇತರೆ ಶುಭಕಾರ್ಯಗಳಿಗೆ ಎಲ್ಲರನ್ನೂ ಆಹ್ವಾನಿಸುವುದು ಇನ್ನೂ ಕಷ್ಟ ಈ ಊರಿನಲ್ಲಿ!. 40 ಜನರನ್ನಷ್ಟೇ ಆಹ್ವಾನಿಸಲಷ್ಟೇ ಅವಕಾಶ. ಪರಿಹಾರ ಏನು ಅಂತ ಚಿಂತೆಯಲ್ಲಿದ್ದವರ ನೆರವಿಗೆ ಬಂತು ಹೊಸ ಟ್ರೆಂಡ್! ಹೀಗಾಗಿ ಈ ಮದುವೆಯಲ್ಲಿ 150 ಕುಟುಂಬದವರು ನೇರವಾಗಿಯೇ ಪಾಲ್ಗೊಂಡರು.
ಮೂಝಿಕ್ಕುಲಂ ಎಂಬಲ್ಲಿ ನಡೆದ ವಿವಾಹವಿದು. ಮೂಝಿಕ್ಕುಲಂ ಸಾಲಾ ಸಂಸ್ಥಾಪಕ ಟಿ.ಆರ್.ಪ್ರೇಮಕುಮಾರ್ ಅವರ ಪುತ್ರ ವಿವೇಕ್ ಹಾಗೂ ಕೊಯಮತ್ತೂರು ನಿವಾಸಿ ನಿಶಾ ನಡುವಿನ ವಿವಾಹ. ಕೋವಿಡ್ ನಿಯಮಗಳ ಕಾರಣ 40ಕ್ಕೂ ಕಡಿಮೆ ಜನರನ್ನು ವಿವಾಹ ಸ್ಥಳಕ್ಕೆ ಆಹ್ವಾನಿಸಿದ ಪ್ರೇಮಕುಮಾರ್, ಉಳಿದವರು ಅವರವರ ಮನೆಯಿಂದಲೇ ವಿವಾಹ ವೀಕ್ಷಿಸುವ ಹಾಗೂ ಸವಿಯೂಟ ಉಣ್ಣುವ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ: ಸರ್ಕಾರಿ ಕಚೇರಿ ಪಿರಿಪಿರಿ; ವಿಜಯವಾಣಿ ರಿಯಾಲಿಟಿ ಚೆಕ್
ಕಾರ್ಬನ್ ನ್ಯೂಟ್ರಲ್ ಫುಡ್ಗಳನ್ನು ಉತ್ತೇಜಿಸುವ ಪ್ರೇಮಕುಮಾರ್, ನೆರೆಮನೆಯವರಿಗೆಲ್ಲ ಕಾರ್ಬನ್ ಫ್ರೀ ಫುಡ್ ಪ್ಯಾಕೆಟ್ಗಳನ್ನು ಉಡುಗೊರೆಯಾಗಿ ಕಳುಹಿಸಿದರು. ಆ ಪ್ಯಾಕೆಟ್ನಲ್ಲಿ ಕಿತ್ತಳೆ, ಪೇರಳೆ (ಸೀಬೆಕಾಯಿ), ಸೇಬು, ಕದಳಿ ಹಣ್ಣು, ಗೋಡಂಬಿ, ಬಾದಾಮಿ, ತರಕಾರಿ ಬೀಜಗಳು, ಫಿಂಗರ್ ಮಿಲೆಟ್ ಬಾಲ್ಸ್, ಕಾರ್ಬನ್ ನ್ಯೂಟ್ರಲ್ ಕಿಚನ್ ಹ್ಯಾಂಡ್ ಬುಕ್ ಮತ್ತು ಅಡಕೆ ಹಾಳೆಯಲ್ಲಿ ತಯಾರಿಸಿ ಲಿಲ್ಲಿ ಹೂವುಗಳಿದ್ದವು.
ಆ ಪೆಟ್ಟಿಗೆಯ ಮುಚ್ಚಳದ ಮೇಲೆ ಒಂದು ಕ್ಯೂಆರ್ ಕೋಡ್ ಇತ್ತು. ಅದನ್ನು ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿದರೆ ಇವರ ವಿವಾಹ ಕಾರ್ಯಕ್ರಮ ನೋಡುವುದಕ್ಕೆ ಸಾಧ್ಯವಿತ್ತು. ಈ ಉಡುಗೊರೆ ಪೊಟ್ಟಣವನ್ನು ಪ್ರೇಮಕುಮಾರ್ ಮತ್ತು ಅವರ ಪತ್ನಿ ಸುಧಾಮಣಿ ಊರಿನ ಮನೆಗಳಿಗೆಲ್ಲ ಸ್ವತಃ ತೆರಳಿ ನೀಡಿ ಮದುವೆಗೆ ಆಹ್ವಾನಿಸಿದ್ದರು. (ಏಜೆನ್ಸೀಸ್)