

ನವದೆಹಲಿ: ಸಿಖ್ ಪಂಥದ ಧರ್ಮ ಗುರು ಶ್ರೀ ಗುರುನಾನಕ್ ದೇವ್ ಅವರ ಜಯಂತಿಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ, ಟ್ವೀಟ್ ಮೂಲಕ ಗೌರವಾರ್ಪಣೆ ಮಾಡಿದ್ದಾರೆ. ಸಿಖ್ ಪಂಥದ ಮೊದಲ ಧರ್ಮ ಗುರು ಶ್ರೀ ಗುರುನಾನಕ್ ದೇವ್ 1469ನೇ ಇಸವಿಯಲ್ಲಿ ಇದೇ ದಿನ ಈಗಿನ ಪಾಕಿಸ್ತಾನದ ನಾನ್ಕನಾದಲ್ಲಿ ಜನ್ಮತಾಳಿದ್ದರು.
ಅವರ ಜೀವನಾದರ್ಶಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಶ್ರೀಗುರುನಾನಕರ ಚಿಂತನೆಗಳು ಜಗದೊಳಿತಿಗೆ ಪ್ರೇರಣೆಯಾಗಲಿ. ಅವರಿಗೆ ತಲೆಬಾಗಿ ನಮಿಸುವೆ ಎಂದು ಟ್ಟೀಟ್ ಮಾಡಿದ್ದಾರೆ.