ಮಹಿಳಾ ಬೋಗಿಗೆ ಬೆತ್ತಲೆ ನುಗ್ಗಿದ್ದ ವ್ಯಕ್ತಿ; ಭಯಭೀತರಾಗಿ ಚೀರಾಡಿದ ಮಹಿಳೆಯರು, ಮುಂದೇನಾಯ್ತು ಗೊತ್ತೇ? | Compartment

dk (27)
Published on

ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ನಿಲ್ದಾಣದಲ್ಲಿ ಕಲ್ಯಾಣ್​ ಪ್ರದೇಶಕ್ಕೆ ಹೊರಟಿದ್ದ ರೈಲಿನಲ್ಲಿ ಬೆತ್ತಲೆ ವ್ಯಕ್ತಿಯೊಬ್ಬ ಏಕಾಏಕಿ ಮಹಿಳಾ ಕಂಪರ್ಟ್​ಮೆಂಟ್​ನೊಳಗೆ(compartment) ನುಗ್ಗಿದ್ದು ಅಲ್ಲಿದ್ದವರನ್ನು ಭಯಭೀತಗೊಳಿಸಿದ ಘಟನೆಯೊಂದು ನಡೆದಿದೆ.

ರೈಲು ಸಂಜೆ ಸುಮಾರು 4.11ಕ್ಕೆ ಫಾಟ್​ಕೂಪರ್​ ನಿಲ್ದಾಣದಲ್ಲಿ ನಿಂತಿತ್ತು. ಇದೇ ಸಂದರ್ಭದಲ್ಲಿ ರೈಲು ಏರಿದ ವ್ಯಕ್ತಿಯೊಬ್ಬ ಅನೀರಿಕ್ಷಿತವಾಗಿ ಮಹಿಳಾ ಬೋಗಿಗಳಿಗೆ ಹತ್ತಿದ್ದಾನೆ. ಇದರಿಂದ ಭಯಭೀತಗೊಂಡ ಮಹಿಳೆಯರು ಕಿರುಚುವ ವಿಡಿಯೋಂದು ಇದೀಗ ವೈರಲ್​ ಆಗಿದೆ.

ಪುರುಷನು ಬೆತ್ತಲೆ ಬಂದ ಕ್ಷಣಕ್ಕೆ ಗಾಬರಿಗೊಂಡ ಮಹಿಳೆಯರು ಕಿರುಚುವುದರ ಜತೆ ಹೊರ ಹೋಗುವಂತೆ ಹೇಳಿದ್ದಾರೆ. ಇದಕ್ಕೆ ಅತ ಮಾತನಾಡದೆ ಅಲ್ಲಿಯೇ ನಿಂತಿದ್ದು, ಹೊರ ನಡೆಯಲು ನಿರಾಕರಿದ್ದಾನೆ. ಬಳಿಕ ರೈಲ್ವೆ ಅಧಿಕಾರಿಗಳನ್ನು ಮತ್ತು ಟಿಕೆಟ್​ ಕಲೆಕ್ಟರ್​ ಕರೆಸಿದ್ದಾರೆ. ಕೆಲ ಸಮಯದವರೆಗೆ ರೈಲು ನಿಲುಗಡೆ ಮಾಡಿ ಇತನನ್ನು ಹೊರ ಹಾಕಿದ್ದಾರೆ.

ಈ ಅಹಿತಕರ ಘಟನೆಯು ಮುಂಬೈನ ಉಪನಗರ ರೈಲ್ವೆ ಜಾಲದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಮಹಿಳಾ ಹಕ್ಕುಗಳ ಗುಂಪುಗಳು ಮತ್ತು ಪ್ರಯಾಣಿಕರ ಸಂಘಗಳು ರೈಲ್ವೆ ಅಧಿಕಾರಿಗಳು ಭದ್ರತೆಯಲ್ಲಿ ಲೋಪ ಎಸಗಿದ್ದಾರೆ ಎಂದು ಟೀಕಿಸಿದ್ದಾರೆ ಮತ್ತು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net