ಸುನೀತಾ ವಿಲಿಯಮ್ಸ್​ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬ! ಮತ್ತೆ ಹೊಸ ದಿನಾಂಕ ಘೋಷಿಸಿದ NASA

dk (26)
Published on

ನವದೆಹಲಿ: ಬಹಳ ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲೋರ್, 2025ರ ಮಾರ್ಚ್​ ಅಂತ್ಯಕ್ಕೆ ಭೂಮಿಗೆ ಮರಳುವ ಸಾಧ್ಯತೆ ಇದೆ ಹೇಳಿದ್ದ ನಾಸಾ(NASA) ಇದೀಗ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಇದೀಗ ಹೊಸ ದಿನಾಂಕ ಘೋಷಿಸಿದೆ.

ಈ ಹಿಂದೆ 2025ರ ಫೆಬ್ರವರಿಲ್ಲಿ ಭೂಮಿಗೆ ಮರಳುದಾಗಿ ಹೇಳಿದ್ದ ನಾಸಾ, ಬಳಿಕ ಮಾರ್ಚ್​ ತಿಂಗಳ ಅಂತ್ಯದಲ್ಲಿ ಬರುವುದಾಗಿ ತಿಳಿಸಿತ್ತು. ಅದರೀಗ ಏಪ್ರೀಲ್​ ತಿಂಗಳಿನಲ್ಲಿ ಮರಳುತ್ತಾರೆ ಎಂದು ಹೊಸ ಪ್ರಕಟಣೆ ತಿಳಿಸಿದೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುನಿತಾ ಮತ್ತು ಬುಚ್ ಅವರನ್ನು ಭೂಮಿಗೆ ಮರಳಿ ತರಲು ಬಾಹ್ಯಾಕಾಶ ನಿಲ್ದಾಣಕ್ಕೆ ಬಾಹ್ಯಾಕಾಶ ನೌಕೆ ಹಾರಲಿದೆ ಎಂದು ನಾಸಾ ಈ ಹಿಂದೆ ಹೇಳಿತ್ತು. ಇಬ್ಬರು ಗಗನಯಾತ್ರಿಗಳನ್ನು ಸ್ವದೇಶಕ್ಕೆ ಕರೆತರುವ ಜವಾಬ್ದಾರಿಯನ್ನು ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಂಪನಿಗೆ ವಹಿಸಲಾಗಿದೆ. ಇದರೊಂದಿಗೆ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಸ್ಪೇಸ್ ಎಕ್ಸ್ ಕ್ಯಾಪ್ಸೂಲ್ ಕಳುಹಿಸಿ ಗಗನಯಾತ್ರಿಗಳನ್ನು ಭೂಮಿಗೆ ತರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಹಲವು ಬಾರಿ ಡೇಟ್ ಆಫ್ ಡೇಟ್ ನೀಡಿ ವಿಳಂಬ ಮಾಡುತ್ತಿದ್ದ ನಾಸಾ ಮತ್ತೊಮ್ಮೆ ಮುಂದೂಡಿದೆ. ಇತ್ತೀಚಿನ ನವೀಕರಣವು ಮಾರ್ಚ್ 2025ರ ಕೊನೆಯ ದಿನಗಳ ಮೊದಲು ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವುದಿಲ್ಲ ಎಂದು ಬಹಿರಂಗಪಡಿಸಿದೆ. ಈ ಹಿನ್ನೆಲೆ ಏಪ್ರೀಲ್​ನಲ್ಲಿ ಬರುವುದಾಗಿ ಹೇಳಲಾಗಿದೆ.

ಈಗಾಗಲೇ ಸುನಿತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಸಾಕಷ್ಟು ಕಳವಳ ವ್ಯಕ್ತವಾಗಿದ್ದು, ಇದೀಗ ಮರಳುವುದು ಮತ್ತಷ್ಟು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ಕಾಳಜಿಯ ಬಗ್ಗೆ ಗಂಭೀರ ಪ್ರಶ್ನೆ ಉದ್ಭವಿಸಿದೆ. ಯಾವುದೇ ಹಾನಿಯಿಲ್ಲದೇ ಆದಷ್ಟು ಬೇಗ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ,(ಏಜೆನ್ಸೀಸ್​​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net