ಅತ್ಯಾಚಾರ ಕೇಸ್​ನಲ್ಲಿ ನಾಗಿನ್​ ಧಾರಾವಾಹಿ ನಟ ಅರೆಸ್ಟ್

Pearl V Puri
Published on

ಮುಂಬೈ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಖ್ಯಾತ ಕಿರುತರೆ ನಟ ಪರ್ಲ್​ ವಿ ಪುರಿ ಸೇರಿ ಐವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

17 ವರ್ಷದ ಬಾಲಕಿ ಮೇಲೆ ಪರ್ಲ್​ ವಿ ಪುರಿ ಲೈಂಗಿಕ ದೌರ್ಜನ್ಯ ವೆಸಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ನಟನನ್ನು ಬಂಧಿಸಲಾಗಿದೆ.

ನಾಗಿನ್ 3 ಧಾರಾವಾಹಿ ಮತ್ತು ಬೆಪನಾ ಪ್ಯಾರ್​ನಲ್ಲಿ ಪರ್ಲ್​ ವಿ ಪುರಿ ನಟಿಸಿದ್ದರು. ಇವರ ಮೇಲಿನ ಅತ್ಯಾಚಾರ ಆರೋಪವನ್ನ ಸಹ ಕಿರುತೆರೆ ನಟರು ಅಲ್ಲಗಳೆದಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿ. ಆರೋಪದಿಂದ ಶೀಘ್ರವೇ ಮುಕ್ತರಾಗಿ ಪುರಿ ಬರುತ್ತಾರೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net